newsics.com
ಬೆಂಗಳೂರು: ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್, ಕೇರಳದ ಕಣ್ಣೂರಿನ ಮಾಡಾಯಿಕಾವು ದೇವಸ್ಥಾನದಲ್ಲಿ ಶತ್ರು ಸಂಹಾರ ಯಾಗ ನಡೆಸಿದ್ದಾರೆ.
ಕೊಲೆ ಆರೋಪ ಹೊತ್ತಿರುವ ನಟ ದರ್ಶನ್ ಶತ್ರುಸಂಹಾರ ಯಾಗಕ್ಕಾಗಿ ಕೇರಳದ ಕಣ್ಣೂರಿನಲ್ಲಿರುವ ಪ್ರಸಿದ್ಧ ಮಾಡಾಯಿಕಾವು ಶ್ರೀ ಭಗವತಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದರ್ಶನ್ ಜೊತೆಗೆ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ , ನಟ ಧನ್ವೀರ್ ಸೇರಿ ಆಪ್ತರಿದ್ದರು.
ಈ ದೇವಾಲಯ ಕೇರಳದ ಕಣ್ಣೂರು ಜಿಲ್ಲೆಯಲ್ಲಿದ್ದು, ಮಂಗಳೂರಿನಿಂದ ತಿರುವನಂತಪುರಕ್ಕೆ ಸಾಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಿಗುವ ದೇವಾಲಯವೇ ಮಾಡಾಯಿಕಾವು ಭಗವತೀ ಕ್ಷೇತ್ರ ಅಥವಾ ತಿರುವಾಡು ಭಗವತೀ ದೇವಾಸ್ಥಾನ. ಈ ದೇಗುಲದಲ್ಲಿ ಪಾರ್ವತಿ ದೇವಿಯು ಭದ್ರಕಾಳಿಯಾಗಿ ಉಗ್ರರೂಪದಲ್ಲಿ ನೆಲೆಸಿದ್ದಾಳೆ ಎಂಬುದು ನಂಬಿಕೆ ಇದೆ.
ನಟ ದರ್ಶನ್ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿದ್ದರು. ಆ ಬಳಿಕ ಅವರಿಗೆ ಕೋರ್ಟ್ ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯಲು ಆರಂಭಿಕ ಷರತ್ತು ಬದ್ಧ ಜಾಮೀನು, ಆ ಬಳಿಕ ರೆಗ್ಯೂಲರ್ ಜಾಮೀನು ನೀಡಿತ್ತು.