newsics.com
ಬೆಂಗಳೂರು: ಶಾಲೆಯೊಂದರಲ್ಲಿ ಮಕ್ಕಳು ಶೌಚಾಲಯವನ್ನು ಕ್ಲೀನ್ ಮಾಡಿಸಿರುವ ಘಟನೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಿಶ್ವಪ್ರಿಯ ಲೇಔಟ್ ನಲ್ಲಿ ನಡೆದಿದೆ.
ವಿಶ್ವಪ್ರಿಯ ಲೇಔಟ್, ಬೇಗೂರು ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಣ್ಣ ಮಕ್ಕಳ ಕೈಯಿಂದ ಮಲ ಮೂತ್ರದ ಶೌಚಾಲಯವನ್ನು ಶಿಕ್ಷಕರು ಸ್ವಚ್ಚಗೊಳಿಸಿದ್ದು, ಇದೀಗ ಸ್ವಚ್ಚಗೊಳಿಸುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಕ್ಕಳು ಶೌಚಾಲಯವನ್ನು ಸ್ವಚ್ಚಗೊಳಿಸುವ ಫೋಟೋಗಳು ವೈರಲ್ ಆಗುತ್ತಿದ್ದಂತೆ ಶಾಲೆಯ ಮುಖ್ಯ ಶಿಕ್ಷಕಿ ಮಾತ್ರ ನಾನು ಕ್ಲೀನ್ ಮಾಡಿಸಿಲ್ಲ ಎಂದು ಕೈತೊಳೆದುಕೊಂಡಿದ್ದಾರೆ. ಸಾಕಷ್ಟು ದಿನಗಳಿಂದ ಶೌಚಾಲಯದ ಗುಂಡಿ ಕಟ್ಟಿಕೊಂಡಿತ್ತು ಸಾಕಷ್ಟು ಬಾರಿ ದೂರು ನೀಡಿದರೂ ಕೂಡ ಯಾರು ಸ್ವಚ್ಚ ಮಾಡಿಸಿರಲಿಲ್ಲ. ಹೀಗಾಗಿ ಸಹ ಶಿಕ್ಷಕರಿಗೆ ಸ್ವಚ್ಚ ಮಾಡಿಸುವಂತೆ ತಿಳಿಸಿದ್ದೆ, ಅವರು ಮಕ್ಕಳ ಕೈಯಲ್ಲಿ ಸ್ವಚ್ಚ ಮಾಡಿಸಿದ್ದಾರೆ ಎಂದು ಮುಖ್ಯ ಶಿಕ್ಷಕಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಶೌಚಾಲಯ ಸ್ವಚ್ಚಗೊಳಿಸಿದ ಆರೋಪ ಶಾಲೆಯ ಪಿಟಿ ಟೀಚರ್ ಸುಮಿತ್ರ ಮೇಲೆ ಬಂದಿದ್ದು, ಈ ಬಗ್ಗೆ ಅವರನ್ನು ವಿಚಾರಿಸಿದರೆ ನಮ್ಮ ಶಾಲೆಯ ಶಿಕ್ಷಕರೆಲ್ಲರು ಸೇರಿಯೇ ಮಕ್ಕಳ ಕೈಯಲ್ಲಿ ಕ್ಲೀನ್ ಮಾಡಿಸಿದ್ದೇವೆ. ಆದರೆ ವಿಡಿಯೋದಲ್ಲಿ ನನ್ನ ಆಡಿಯೋ ಮಾತ್ರ ಕೇಳಿಸಿದೆ ನನ್ನಿಂದ ತಪ್ಪಾಗಿದೆ ಕ್ಷಮಿಸಿಬಿಡಿ ಎಂದು ಬೇಡಿಕೊಂಡಿದ್ದಾರೆ.
ಶಿಕ್ಷಣ ಇಲಾಖೆ ಶಾಲೆಯ ನಿರ್ವಹಣೆಗಾಗಿ ಪ್ರತಿವರ್ಷ ಇಂತಿಷ್ಟು ಎಂದು ಅನುದಾನ ಬಿಡುಗಡೆ ಮಾಡುತ್ತದೆ. ಆದರೆ ಆ ಹಣವನ್ನು ಗುಳುಂ ಮಾಡಿ ಆ ಪುಟ್ಟ ಮಕ್ಕಳ ಕೈಯಲ್ಲಿ ಶೌಚಾಲಯದ ಗುಂಡಿ ಕ್ಲೀನ್ ಮಾಡಿಸಿದ ಶಿಕ್ಷಕರಿಗೆ ನಿಜವಾಗಿಯೂ ನಾಚಿಕೆ ಆಗಬೇಕು.