newsics.com
ನೀವು ಎಂದಾದ್ರೂ ಪ್ರೀತಿಯಲ್ಲಿ ಬಿದ್ದಿದ್ದೀರಾ? ಪ್ರೀತಿಯಲ್ಲಿ ಬಿದ್ದಾಗ ದೇಹದಲ್ಲಿ ಏನೆಲ್ಲಾ ಬದಲಾವಣೆಯಾಗಬಹುದು ಎಂಬುದರ ಬಗ್ಗೆ ಯೋಚಿಸಿದ್ದೀರಾ. ಯೆಸ್, ನಿಮಗೆ ಯಾರ ಮೇಲಾದ್ರೂ ಪ್ರೀತಿಯಾದ್ರೆ ದೈಹಿಕವಾಗಿ, ಭಾವನಾತ್ಮಕ ಹಾಗೂ ಮಾನಸಿಕವಾಗಿ ನಮ್ಮಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಂತೆ. ಹೃದಯ ಬಡಿತ ಹೆಚ್ಚುವುದರಿಂದ ಉಸಿರಾಟ ಬದಲಾವಣೆವರೆಗೆ ಪ್ರೀತಿಯಲ್ಲಿರುವಾಗ ಜೈವಿಕ ಪ್ರಕ್ರಿಯೆಯಲ್ಲಿ ಹಲವು ಬದಲಾವಣೆಗಳಾಗುತ್ತವೆ.
ಪ್ರೀತಿಯ ಅನುಭವ ಮನಸ್ಸಿಗೆ ತುಂಬಾನೇ ಸಂತೋಷ ನೀಡುತ್ತೆ, ಪ್ರೀತಿಗಾಗಿ ನಾವು ಏನು ಮಾಡಲು ಸಿದ್ಧ, ಆ ಪ್ರೀತಿಯೇ ನನ್ನ ಪ್ರಪಂಚ, ಆ ಪ್ರಪಂಚದಲ್ಲಿ ನಾವಿಬ್ಬರು ಮಾತ್ರ ಇರಬೇಕು ಎಂದು ಅನಿಸರಲಾರಂಭಿಸುತ್ತದೆ. ಅವರ ನೆನಪು ಮನಸ್ಸಿಗೆ ಖುಷಿ ಕೊಡುತ್ತದೆ, ಅವರ ಜೊತೆ ಕಳೆಯುವ ಪ್ರತಿಯೊಂದು ಕ್ಷಣ ತುಂಬಾ ವಿಶೇಷ ಅನಿಸಲಾರಂಭಿಸುತ್ತದೆ.
ನಾವು ಪ್ರೀತಿಯಲ್ಲಿ ಇರುವಾಗ ನಮ್ಮನ್ನು ತುಂಬಾ ಇಷ್ಟಪಡುವ ವ್ಯಕ್ತಿ ಇದ್ದಾನೆ/ಳೆ ಎಂಬ ಭಾವನೆ ನಮ್ಮಲ್ಲಿ ವಿಶೇಷ ಭಾವನೆ ಮೂಡಿಸುತ್ತದೆ. ನನಗೋಸ್ಕರ ಒಂದು ಜೀವ ತುಂಬಾನೇ ಇಷ್ಟಪಡುತ್ತಿದೆ, ಅವನ/ಅವಳ ಪ್ರಪಂಚದಲ್ಲಿ ನನಗೆ ಮಾತ್ರ ಸ್ಥಾನ ಎಂಬ ಭಾವನೆನಾನು ತುಂಬಾ ವಿಶೇಷ ವ್ಯಕ್ತಿ ಎಂಬ ಭಾವನೆ ಮೂಡಿಸುತ್ತದೆ.ನಾವೇ ಅವರ ಬದುಕಿನ ವಿಶೇಷ ವ್ಯಕ್ತಿ, ಅಪ್ಪ-ಅಮ್ಮನ ಇಟ್ಟರೆ ನನ್ನ ಪ್ರೀತಿಸುವ, ನನ್ನ ಮುದ್ದಾಡುವ ಜೀವ ಎಂಬ ಭಾವನೆಯೇ ಅತಿ ಮಧುರ.
ಪ್ರೀತಿಯೆಂಬುವುದು ಮೂಡಿದರೆ ಭವಿಷ್ಯದ ಬಗ್ಗೆ ತುಂಬಾ ಕಲ್ಪನೆ ಮೂಡಿಸುತ್ತದೆ, ನಾವು ಮುಂದೆ ಜೊತೆಯಾಗಿ ಖುಷಿಯಿಂದ ಬಾಳಬೇಕು, ನಮ್ಮದೇ ಆದ ಪುಟ್ಟ ಪ್ರಪಂಚದಲ್ಲಿ ನಾವು ಪ್ರಣಯ ಪಕ್ಷಿಗಳಂತೆ ಖುಷಿಯಿಂದ ಬಾಳಬೇಕು, ನಮ್ಮ ಬದುಕು ಹಾಗಿರಬೇಕು, ಹೀಗಿರಬೇಕು ಎಂದು ಬದುಕಿನ ಬಗ್ಗೆ ಸುಂದರ ಕಲ್ಪನೆಗಳನ್ನು ಮೂಡಿಸುತ್ತದೆ. ಈ ಪ್ರೀತಯೆಂಬುವುದು ನಾವು ಬದುಕಿನಲ್ಲಿ ಏನಾದರು ಸಾಧಿಸಬೇಕು ಎಂಬ ಛಲ ಕೂಡ ಹುಟ್ಟು ಹಾಕುತ್ತೆ.
ಪ್ರೀತಿಗೋಸ್ಕರ ಏನು ಸಹಿಸಲು ಸಿದ್ಧ ಎಂಬ ಧೈರ್ಯ ಮೂಡುತ್ತೆ, ಇಡೀ ಪ್ರಪಂಚವೇ ನಮ್ಮ ವಿರುದ್ಧ ನಿಂತರೂ ನನ್ನ ಪ್ರೀತಿಸುವ ಜೀವವೊಂದೇ ಸಾಕು ಬದುಕಬಲ್ಲೇ ಎಂಬ ಧೈರ್ಯ ಮೂಡಿಸುತ್ತೆ. ಮುಂದೆ ಏನು ಎಂಬ ಭಯವಿರಲ್ಲ, ಅಲ್ಲಿ ಚೆನ್ನಾಗಿರುತ್ತೇವೆ ಎಂಬ ಭರವಸೆ ಮಾತ್ರ ಕಾಣುತ್ತೆ.
ಪ್ರೀತಿ ಧೈರ್ಯವನ್ನು ಮಾತ್ರವಲ್ಲ, ಗೊಂದಲವನ್ನೂ ಮೂಡಿಸುತ್ತದೆ. ಈ ಕಾರಣಕ್ಕೆ ಪ್ರೀತಿಯಲ್ಲಿರುವಾಗ ಸರಿ ತಪ್ಪುಗಳು ಗೊತ್ತಾಗಲ್ಲ, ಕೆಲವೊಮ್ಮೆ ಪ್ರೀತಿಗೋಸ್ಕರ ಕೆಲವುತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ನಂತರ ಪಶ್ಚಾತಾಪ ಪಡುವಂತಾಗುವುದು, ಪ್ರೀತಿಗೋಸ್ಕರ ಅಪ್ಪ-ಅಮ್ಮನಿಂದ ದೂರಾಗಬಾರದಿತ್ತು ಅಯ್ಯೋ ಕುರುಡು ಪ್ರೀತಿಯಲ್ಲಿ ಈತನನ್ನು ಅಥವಾ ಈಕೆಯನ್ನು ಸರಿಯಾಗಿ ಅರಿತುಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಗೊಂದಲ ಉಂಟು ಮಾಡುತ್ತೆ. ಹಾಗಾಗಿ ಪ್ರೀತಿ ಬದುಕಿನಲ್ಲಿ ಹಲವು ಗೊಂದಲಗಳನ್ನೂ ಉಂಟು ಮಾಡುತ್ತೆ.
ಪ್ರೀತಿಯಲ್ಲಿರುವಾಗ ನಮ್ಮನ್ನೇ ನಾವು ತುಂಬಾ ಇಷ್ಟಪಡಲಾರಂಭಿಸುತ್ತೇವೆ, ನಮ್ಮನ್ನು ಪ್ರೀತಿಸುವ ಜೀವ ಇರುವಾಗ ನಮಗೇ ನಾವು ತುಂಬಾ ಇಷ್ಟವಾಗಲಾರಂಭಿಸುತ್ತದೆ. ನಾವು ತುಂಬಾನೇ ವಿಶೇಷ ವ್ಯಕ್ತಿ ಎಂಬ ಭಾವನೆ ಮೂಡಿಸುತ್ತದೆ.