newsics.com
ಬೆಂಗಳೂರು: ವಿವಿಧ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಪೊಲೀಸರು ಬಿಗಿಬಂದೋಬಸ್ತ್ ಕೈಗೊಂಡಿದ್ದಾರೆ. ರೋಡ್ನಲ್ಲಿ ಮೆರವಣಿಗೆ ಇಲ್ಲ, ಪ್ರತಿಭಟನೆ ಇಲ್ಲ. ಏನೇ ಇದ್ದರೂ ಪ್ರೀಡಂ ಪಾರ್ಕ್ನಲ್ಲಿ ಮಾತ್ರ ಅವಕಾಶ ಎಂದು ಬಿ.ದಯಾನಂದ್ ಎಚ್ಚರಿಕೆ ನೀಡಿದ್ದಾರೆ.
ಬಲವಂತವಾಗಿ ಬಂದ್ ಮಾಡಿಸಿದ್ರೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿರುವ ಪೊಲೀಸ್ ಕಮಿಷನರ್, ಬಂದ್ ನೇತೃತ್ವ ವಹಿಸಿರೋ ವಾಟಾಳ್ ನಾಗರಾಜ್ಗೆ ಸುಪ್ರಿಂಕೋರ್ಟ್ ಗೈಡ್ಲೈನ್ಸ್ ಮನವರಿಕೆ ಮಾಡಿಕೊಟ್ಟಿದ್ದಾರೆ. ಇತ್ತ, ಪ್ರತಿಭಟನೆಗೆ ಸಾಥ್ ನೀಡಿರುವ ಸಂಘಟಕರ ಮುಖಂಡರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಸಂಘಟಕರಿಗೆ ಒಂದಲ್ಲ ಎರಡಲ್ಲ 4-5 ಪೊಲೀಸ್ ಠಾಣೆಯಿಂದ ನೋಟಿಸ್ ಜಾರಿಯಾಗಿದೆ. ಸುಬ್ರಮಣ್ಯಪುರ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಉಪ್ಪಾರಪೇಟೆ ಹಾಗೂ ಹಲಸೂರು ಪೊಲೀಸರಿಂದ ನೋಟಿಸ್ ನೀಡಲಾಗಿದೆ. ಕರ್ನಾಟಕ ಬಂದ್ಗೆ ಬೆಂಬಲ ಸೂಚಿಸಿರುವ ರಾಜ್ಯ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿ ಶೆಟ್ಟಿ ಬೈಂದೂರ್ಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರ ವಿಭಾಗ ಮತ್ತು ಪಶ್ಚಿಮ ವಿಭಾಗದಲ್ಲಿ ಮಾತ್ರ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಸಂಘಟನೆಯ ಪ್ರಮುಖರ ಮನೆ ಬಳಿಯೇ ಪೊಲೀಸರು ಅಲರ್ಟ್ ಆಗಿದ್ದಾರೆ. ಹಿಂದಿನ ಬಾರಿ ಕನ್ನಡಪರ ಸಂಘಟನೆಗಳ ಹೋರಾಟದಲ್ಲಿ ನಾಮಫಲಕ ಪುಡಿ ಮಾಡಿದ್ರು. ಈ ಬಾರಿ ಆ ರೀತಿಯ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.
- ಟೌನ್ಹಾಲ್, ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್ ಭಾಗದಲ್ಲಿ ಖಾಕಿ ಅಲರ್ಟ್
- ಕಮಿಷನರ್ ನೇತೃತ್ವದಲ್ಲಿ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಿಂದ ಭದ್ರತೆ
- ಪಶ್ಚಿಮ ಮತ್ತು ಕೇಂದ್ರ ವಿಭಾಗದಲ್ಲಿ ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ ಭದ್ರತೆ ನಿಯೋಜನೆ
- 4 ಮಂದಿ ಎಸಿಪಿ ಸೇರಿದಂತೆ 11 ಮಂದಿ ಇನ್ಸ್ಪೆಕ್ಟರ್ಗಳು ಫೀಲ್ಡ್ಗೆ ಇಳಿದಿದ್ದಾರೆ
- ಬೆಂಗಳೂರಿನ ಪ್ರಮುಖ ಸ್ಥಳದಲ್ಲಿ 65 ಪಿಎಸ್ಐ ನಿಯೋಜನೆ ಮಾಡಲಾಗಿದೆ
- ಒಟ್ಟು ಮಹಿಳಾ ಸಿಬ್ಬಂದಿ ಸೇರಿದಂತೆ 700 ಮಂದಿ ಪೊಲೀಸ್ ಸಿಬ್ಬಂದಿ
- ಎರಡು ವಿಭಾಗದಲ್ಲಿ ಒಟ್ಟು 1200 ಪೊಲೀಸರನ್ನು ಫೀಲ್ಡ್ಗೆ ಇಳಿಸಲಾಗಿದೆ
- ಕೆಎಸ್ಆರ್ಪಿ 46, ಸಿಎಆರ್ 30 ಹಾಗೂ ಎರಡು ವಾಟರ್ ಜೆಟ್ ನಿಯೋಜನೆ