newsics.com
ಜನರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಹಲವು ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ. ಕೆಲವರು ತಮ್ಮ ಮನೆಗಳಲ್ಲಿ ಹವಾನಿಯಂತ್ರಣಗಳನ್ನು ಅಳವಡಿಸುವ ಬಗ್ಗೆಯೂ ಯೋಚಿಸುತ್ತಿದ್ದಾರೆ. ಕೆಲವರು ಕೂಲರ್‌ಗಳ ಮೊರೆ ಹೋಗುತ್ತಿದ್ದಾರೆ. ಆದರೆ ಅನೇಕ ಜನರು ಕೇವಲ ಸೀಲಿಂಗ್ ಫ್ಯಾನ್ ಮೂಲಕವೇ ತಂಪು ಮಾಡಿಕೊಳ್ಳುತ್ತಿದ್ದಾರೆ.
ಆದರೆ, ಇಂದಿನ ಸೆಖೆಗೆ ಈ ಫ್ಯಾನ್ ಏನೂ ನಾಟುವುದಿಲ್ಲ. ಕೆಲವೊಂದು ಬಾರಿ ಇದರಿಂದ ಬಿಸಿ ಗಾಳಿ ಕೂಡ ಬರಲು ಪ್ರಾರಂಭಿಸುತ್ತದೆ.
ಮನೆಯಲ್ಲಿ ಅಳವಡಿಸಲಾದ ಸೀಲಿಂಗ್ ಫ್ಯಾನ್ ಬಿಸಿ ಗಾಳಿಯನ್ನು ನೀಡಲು ಪ್ರಾರಂಭಿಸಿದರೆ, ಅದರ ಸ್ಥಾನ ಸರಿಯಾಗಿಲ್ಲ ಎಂದು ಅರ್ಥಮಾಡಿಕೊಳ್ಳಿ. ತಂಪಾದ ಗಾಳಿಯನ್ನು ಬೀಸಲು ಫ್ಯಾನ್ ಬ್ಲೇಡ್‌ಗಳು ಅಪ್ರದಕ್ಷಿಣಾಕಾರವಾಗಿ ತಿರುಗಬೇಕು. ಫ್ಯಾನ್‌ನ ಯಾವುದೇ ಬ್ಲೇಡ್ ವಕ್ರವಾಗಿದ್ದರೆ ಅಥವಾ ಸಡಿಲವಾಗಿದ್ದರೆ, ಅದನ್ನು ತಕ್ಷಣ ಸರಿ ಮಾಡಿಸಿ.
ಕೆಪಾಸಿಟರ್‌ಗಳನ್ನು ಬದಲಾಯಿಸಿ:
ಹಳೆಯ ಅಥವಾ ಕೆಟ್ಟ ಕೆಪಾಸಿಟರ್ ಫ್ಯಾನ್ ನಿಧಾನವಾಗಲು ಕಾರಣವಾಗಬಹುದು. ಹೊಸ ಕೆಪಾಸಿಟರ್ ಅಳವಡಿಸುವ ಮೂಲಕ ನೀವು ಫ್ಯಾನ್‌ನ ವೇಗವನ್ನು ಹೆಚ್ಚಿಸಬಹುದು. ಬೇಸಿಗೆ ಕಾಲದಲ್ಲಿ ಕೆಪಾಸಿಟರ್ ಕೆಟ್ಟು ಹೋಗುವ ಸಾಧ್ಯತೆ ಹೆಚ್ಚು.. ಹೀಗಾಗಿ ಕೆಪಾಸಿಟರ್ ಅನ್ನು ಚೆಕ್ ಮಾಡಿ, ಹಾಳಾಗಿದ್ದರೆ ಅಥವಾ ನಿಧಾನವಾಗಿ ಗಾಳಿ ಬರುತ್ತಿದ್ದರೆ ಬದಲಾಯಿಸಿ.
ಒದ್ದೆಯಾದ ಟವಲ್ ಸಹಾಯ ಮಾಡುತ್ತದೆ:
ಬೇಸಿಗೆಯಲ್ಲಿ ಅನೇಕ ಜನರು ತಲೆಯ ಮೇಲೆ ಒದ್ದೆ ಟವೆಲ್‌ಗಳನ್ನು ಹಾಕಿ ತಿರುಗಾಡುವುದನ್ನು ನೀವು ನೋಡಿರಬೇಕು. ಇದರಿಂದಾಗಿ ಸುತ್ತಲಿನ ಬಿಸಿ ಗಾಳಿಯು ತಂಪಾಗಿರುತ್ತದೆ. ಹಾಗೆಯೆ ಫ್ಯಾನ್‌ನ ಗಾಳಿಯನ್ನು ತಂಪಾಗಿಸಲು ಕೂಡ ನೀವು ಈ ತಂತ್ರವನ್ನು ಬಳಸಬಹುದು. ನೀವು ಟೇಬಲ್ ಫ್ಯಾನ್ ಮುಂದೆ ಒದ್ದೆಯಾದ ಟವಲ್ ಅನ್ನು ನೇತು ಹಾಕಬಹುದು. ಆಗ ಗಾಳಿಯು ಹೆಚ್ಚಿನ ತಂಪನ್ನು ನೀಡುತ್ತದೆ. ಅದೇ ರೀತಿಯಲ್ಲಿ ಐಸ್ ಅನ್ನು ಸಹ ಬಳಸಬಹುದು. ಇದಕ್ಕಾಗಿ ನೀವು ಫ್ಯಾನ್ ಮುಂದೆ ಸ್ವಲ್ಪ ಐಸ್ ಇಡಬೇಕಾಗುತ್ತದೆ. ಈಗ ಅದರಿಂದ ಹೊರಬರುವ ಗಾಳಿಯು ತುಂಬಾ ತಂಪಾಗಿರುವುದನ್ನು ನೀವು ನೋಡುತ್ತೀರಿ. ಸೀಲಿಂಗ್ ಫ್ಯಾನ್ ಕೆಳಗಡೆ ಐಸ್ ಅಥವಾ ಒದ್ದೆ ಬಟ್ಟೆ ಇಟ್ಟರೂ ತಂಪು ಗಾಳಿ ಸಿಗುತ್ತದೆ.
ಅಡ್ಡ ಗಾಳಿ ವ್ಯವಸ್ಥೆ:
ನಿಮ್ಮ ಕೋಣೆ ಕಿಟಕಿಯ ಪಕ್ಕದಲ್ಲಿದ್ದರೆ ಅಥವಾ ಕೋಣೆಯಲ್ಲಿ ಕಿಟಕಿ ಇದ್ದರೆ, ಅದನ್ನು ತೆರೆದಿಡಿ. ಅಡ್ಡ ಗಾಳಿ ವ್ಯವಸ್ಥೆಯಿಂದಾಗಿ, ತಂಪಾದ ಗಾಳಿಯು ಕೋಣೆಗೆ ಪ್ರವೇಶಿಸುತ್ತದೆ. ನೀವು ಕಿಟಕಿಯ ಮೇಲೆ ಸಣ್ಣ ಟೇಬಲ್ ಫ್ಯಾನ್ ಅನ್ನು ಸಹ ಇರಿಸಬಹುದು. ಇದು ಕೋಣೆಯಲ್ಲಿ ಗಾಳಿಯ ಪ್ರಸರಣವನ್ನು ಹೆಚ್ಚಿಸುತ್ತದೆ.