newsics.com
ಲಕ್ನೋ : ಉತ್ತರಪ್ರದೇಶದ ಹತ್ರಾಸ್ನಲ್ಲಿ ಕಾಲೇಜೊಂದರ ಪ್ರಾಧ್ಯಪಕನ ವಿರುದ್ಧ ವಿದ್ಯಾರ್ಥಿನಿಯರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಕಾಲೇಜಿನ ಶಿಸ್ತುಪಾಲನಾಧಿಕಾರಿಯೂ ಆಗಿರುವ ಪ್ರಾಧ್ಯಪಕನ ಅನುಚಿತ ವರ್ತನೆಯ ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದೀಗ ಪ್ರಾಧ್ಯಪಕನ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ.
ಹತ್ರಾಸ್ನಲ್ಲಿ ಸೇಠ್ ಫೂಲ್ ಚಂದ್ ಬಾಗ್ಲಾ ಎಂಬ ಕಾಲೇಜಿನ ಪ್ರಾಧ್ಯಪಕ ರಜನೀಶ್ ಕುಮಾರ್ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಆರೋಪದ ಬೆನ್ನಲ್ಲೇ ಆತನನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.
ಕಾಲೇಜಿನ ಶಿಸ್ತುಪಾಲನಾಧಿಕಾರಿಯ ಮುಖವಾಡ ಬಹಿರಂಗಪಡಿಸಿದ ಅನಾಮಧೇಯ ಪತ್ರ!
10 ತಿಂಗಳ ಹಿಂದೆ ಹತ್ರಾಸ್ ಪೊಲೀಸರಿಗೆ ಅನಾಮಧೇಯ ಪತ್ರವೊಂದು ಬಂದಿದೆ. ಪ್ರೊಫೆಸರ್ ರಜನೀಶ್ ಕುಮಾರ್ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ನೀಡುವ ಮತ್ತು ಉದ್ಯೋಗಾವಕಾಶವನ್ನು ಕಲ್ಪಿಸುವ ಆಮಿಷವೊಡ್ಡಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವುದಲ್ಲದೆ, ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಅದರಲ್ಲಿ ಉಲ್ಲೇಖಿಸಲಾಗಿತ್ತು.
59 ಅಶ್ಲೀಲ ವೀಡಿಯೊಗಳು!
ಅನಾಮಧೇಯ ದೂರುಗಳೊಂದಿಗೆ ರಜನೀಶ್ ಕುಮಾರ್ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸುವ 59 ವೀಡಿಯೊಗಳಿರುವ ಪೆನ್ ಡ್ರೈವ್ ಕೂಡ ಲಗತ್ತಿಸಲಾಗಿತ್ತು. ವೀಡಿಯೊದಲ್ಲಿ ವಿದ್ಯಾರ್ಥಿಗಳ ಮುಖವನ್ನು ಮರೆಮಾಡಲಾಗಿದೆ. ಕುಮಾರ್ ಕ್ಯಾಮೆರಾದಲ್ಲಿ ಕೃತ್ಯಗಳನ್ನು ರೆಕಾರ್ಡ್ ಮಾಡಿ ನಂತರ ಸಂತ್ರಸ್ತರನ್ನು ಮತ್ತೆ ತನ್ನ ಕೃತ್ಯಕ್ಕೆ ಸಹಕರಿಸುವಂತೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎಂದು ಪತ್ರದಲ್ಲಿ ಆರೋಪಿಸಲಾಗಿತ್ತು