Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಪ್ರಮಾಣವಚನ ಸ್ವೀಕಾರ ವೇಳೆ ಸಂಸತ್ತಲ್ಲೇ ಜೈ ಪ್ಯಾಲೆಸ್ತೀನ್ ಘೋಷಣೆ ಕೂಗಿದ ಓವೈಸಿ! ವಿಡಿಯೋ ನೋಡಿ
ದೇಶ

ಪ್ರಮಾಣವಚನ ಸ್ವೀಕಾರ ವೇಳೆ ಸಂಸತ್ತಲ್ಲೇ ಜೈ ಪ್ಯಾಲೆಸ್ತೀನ್ ಘೋಷಣೆ ಕೂಗಿದ ಓವೈಸಿ! ವಿಡಿಯೋ ನೋಡಿ

Share
2 Min Read
SHARE

newsics.com

ನವದೆಹಲಿ: ಎಐಎಂಐಎಂ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಮಂಗಳವಾರ 18ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕಾರ ವೇಳೆ “ಜೈ ಪ್ಯಾಲೆಸ್ತೀನ್” ಎಂದು ಘೋಷಣೆ ಕೂಗಿದ್ದಾರೆ.

ಈ ಘೋಷಣೆ ವಿವಾದಕ್ಕೆ ಕಾರಣವಾಗಿದೆ. ಐದನೇ ಬಾರಿಗೆ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಒವೈಸಿ, ನಂತರ ಎಕ್ಸ್‌ನಲ್ಲಿ ಈ ಕುರಿತಾಗಿ ಪೋಸ್ಟ್‌ ಮಾಡಿದ್ದರು,

ಭಾರತದಲ್ಲಿ ಸಾಮಾಜಿಕವಾಗಿ ಕೆಳಸ್ತರದಲ್ಲಿರುವವರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಪ್ರಸ್ತಾಪಿಸುವುದನ್ನು ಮುಂದುವರಿಸುವುದಾಗಿ ಹೇಳಿದರು.

ಅಸಾದುದ್ದೀನ್ ಓವೈಸಿ ಪ್ರಮಾಣವಚನ ಸ್ವೀಕರಿಸಲು ತೆರಳುತ್ತಿದ್ದಂತೆ ಬಿಜೆಪಿ ಸಂಸದರು ‘ಜೈ ಶ್ರೀರಾಮ್’ ಘೋಷಣೆ ಕೂಗಲು ಆರಂಭಿಸಿದರು. ಘೋಷಣೆಗಳಿಂದ ವಿಚಲಿತರಾಗದ ಓವೈಸಿ ಉರ್ದುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು ಮತ್ತು “ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ತೀನ್” ಎಂದು ಹೇಳುವ ಮೂಲಕ ತಮ್ಮ ಪ್ರಮಾಣವಚನ ಮುಕ್ತಾಯ ಮಾಡಿದರು.

2019 ರಲ್ಲಿ, ಓವೈಸಿ ತಮ್ಮ ಪ್ರಮಾಣವಚನವನ್ನು “ಜೈ ಭೀಮ್, ಅಲ್ಲಾ-ಓ-ಅಕ್ಬರ್ ಮತ್ತು ಜೈ ಹಿಂದ್” ಎಂಬ ಪದಗಳೊಂದಿಗೆ ಮುಕ್ತಾಯಗೊಳಿಸಿದ್ದರು. 2024 ರ ಲೋಕಸಭೆ ಚುನಾವಣೆಯಲ್ಲಿ ಹೈದರಾಬಾದ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರನ್ನು 3.3 ಲಕ್ಷ ಮತಗಳಿಂದ ಓವೈಸಿ ಸೋಲಿಸಿ ಸಂಸತ್‌ಗೆ ಪ್ರವೇಶ ಪಡೆದಿದ್ದಾರೆ.

ಅವರ ಘೋಷಣೆಯ ಬಗ್ಗೆ ವಿವಾದ ಭುಗಿಲೆದ್ದಂತೆ, ಓವೈಸಿ ಅವರು ‘ಜೈ ಪ್ಯಾಲೆಸ್ತೀನ್’ ಎಂದು ಹೇಳಬಾರದು ಎಂದು ಸಂವಿಧಾನದಲ್ಲಿ ಎಲ್ಲೂ ಹೇಳಿಲ್ಲ ಎಂದು ವಾದ ಮಾಡಿದ್ದಾರೆ.

ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರು ಓವೈಸಿ ನೀಡಿದ ‘ಜೈ ಪ್ಯಾಲೆಸ್ತೀನ್’ ಘೋಷಣೆ “ಸಂಪೂರ್ಣವಾಗಿ ತಪ್ಪು” ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.

ಓವೈಸಿ ಅವರ ಘೋಷಣೆಗೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, “ನಾವು ಯಾವುದೇ ದೇಶವನ್ನು ಬೆಂಬಲಿಸುವುದಿಲ್ಲ ಅಥವಾ ವಿರೋಧಿಸುವುದಿಲ್ಲ, ಆದರೆ ಯಾವುದೇ ದೇಶದ ಹೆಸರನ್ನು ಸದನದಲ್ಲಿ ತೆಗೆದುಕೊಳ್ಳುವುದು ಸರಿಯಲ್ಲ” ಎಂದು ಹೇಳಿದರು.
ಪ್ಯಾಲೆಸ್ತೇನ್‌ ಪರ ಹೋರಾಟ ಮಾಡುವ ಭಯೋತ್ಪಾದಕ ಸಂಘಟನೆಯಾದ ಹಮಾಸ್ ವಿರುದ್ಧ ಇಸ್ರೇಲ್‌ನ ಯುದ್ಧವು ಜೂನ್‌ನಲ್ಲಿ ಎಂಟನೇ ತಿಂಗಳಿಗೆ ಪ್ರವೇಶಿಸಿತು, ಸುಮಾರು 40,000 ಜನರು ಇಲ್ಲಿಯವರೆಗೂ ಸಾವು ಕಂಡಿದ್ದು, ಲಕ್ಷಕ್ಕೂ ಅಧಿಕ ಜನ ಸ್ಥಳಾಂತರಗೊಂಡಿದ್ದಾರೆ.

Asaduddin Owaisi chants 'Jai Palestine' after taking oath as MP.

This is the same Owaisi who refuses to say 'Vande Mataram' and keeps opposing it. pic.twitter.com/cGwIUeOj7P

— Varun Kumar Rana (@VarunKrRana) June 25, 2024

ಹಾಲಿನ ದರ‌ ಪ್ರತಿ‌ ಲೀಟರ್‌ಗೆ 2 ರೂ. ಹೆಚ್ಚಳ: ನಾಳೆಯಿಂದಲೇ ಅನ್ವಯ

ರಸ್ತೆಯಲ್ಲಿ ನಡೆದು ಸಾಗುತ್ತಿದ್ದ ಯುವತಿ ಎದುರು ಅಸಹ್ಯ ವರ್ತನೆ ತೋರಿದ ಕಾಮುಕ,ವೈರಲ್ ವಿಡಿಯೋ ನೋಡಿ

ರಸ್ತೆಯಲ್ಲಿ ನಡೆದು ಸಾಗುತ್ತಿದ್ದ ಯುವತಿ ಎದುರು ಅಸಹ್ಯ ವರ್ತನೆ ತೋರಿದ ಕಾಮುಕ,ವೈರಲ್ ವಿಡಿಯೋ ನೋಡಿ

ಮೊದಲ‌ ಮಳೆಗೇ ಸೋರುತಿಹುದು ಅಯೋಧ್ಯೆ ಬಾಲರಾಮನ ಮಂದಿರ!

TAGGED:Owaisi Jai Palestine slogan Parliament during the oath taking newsics
Share This Article
Facebook Twitter Copy Link Print
Previous Article ಹಾಲಿನ ದರ‌ ಪ್ರತಿ‌ 50 ಎಂಎಲ್‌ಗೆ 2 ರೂ. ಹೆಚ್ಚಳ: ನಾಳೆಯಿಂದಲೇ ಅನ್ವಯ
Next Article ಸಂಸತ್‌ನಲ್ಲಿ ಇದೇ ಮೊದಲ ಬಾರಿ ಸ್ಪೀಕರ್ ಸ್ಥಾನಕ್ಕೆ ಚುನಾವಣೆ: ‌ನಾಳೆ ಓಂ ಬಿರ್ಲಾ, ಸುರೇಶ್ ನಡುವೆ ಸ್ಪರ್ಧೆ

Popular Posts

Smart phones expensive ದುಬಾರಿಯಾಗಲಿವೆ ಮೊಬೈಲ್, ಲ್ಯಾಪ್‌ಟಾಪ್! ಮತ್ತೆ ಶೇ.10-15ರಷ್ಟು ಹೆಚ್ಚಳ ಸಾಧ್ಯತೆ

1 Min Read

Newborn baby killed ಹೆಣ್ಣುಮಗುವೆಂಬ ಕಾರಣಕ್ಕೆ 13 ದಿನಗಳ ಹಸುಗೂಸನ್ನು ಸಂಪ್‌ಗೆಸೆದು ಕೊಂದ ತಂದೆ!

1 Min Read

Blackmail by young woman ಹಣಕ್ಕಾಗಿ‌ ಬೆತ್ತಲಾದ ಬೆಂಗಳೂರು ಯುವತಿ! ಯುವ ಕ್ರಿಕೆಟಿಗನನ್ನೂ ನಗ್ನಗೊಳಿಸಿ ಬ್ಲ್ಯಾಕ್‌ಮೇಲ್!

2 Min Read

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

You Might Also Like

ದೇಶಪ್ರಮುಖ

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
Crimeದೇಶ

Fast Track Court For Exam Paper Leak | ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

1 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?