newsics.com
ಬೆಂಗಳೂರು: ಅಸಹಜ ಲೈಂಗಿಕತೆಗೆ ಹೆಂಡತಿಯನ್ನು ಒತ್ತಾಯಿಸಿ ಕೊಲೆಗೈದು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನ ಕಣ್ಣೆದುರೇ ಈ ದುರ್ಘಟನೆ ನಡೆದಿದೆ.
ಮಮತಾ (33) ಪತಿಯಿಂದ ಕೊಲೆಯಾದ ಪತ್ನಿ. ಪತ್ನಿ ಕೊಲೆ ಬಳಿಕ ನೇಣು ಬಿಗಿದುಕೊಂಡು ಪತಿ ಸುರೇಶ್ (40). ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇತ್ತೀಚೆಗೆ ದಂಪತಿ ಮಧ್ಯೆ ಜಗಳ ಆಗುತ್ತಿತ್ತು. ಕುಡಿದು ಪತ್ನಿ ಜೊತೆ ಜಗಳ ಮಾಡುತ್ತಿದ್ದನು. ಇವತ್ತು ಬೆಳಗ್ಗೆ ಪತಿ-ಪತ್ನಿ ಮಧ್ಯೆ ಜಗಳ ಉಂಟಾಗಿತ್ತು. ಜಗಳದ ವೇಳೆ ಪತ್ನಿಯನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಮೃತ ಸುರೇಶ್ ತನ್ನ 6 ವರ್ಷದ ಮಗನ ಮುಂದೆಯೇ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ನಂತರ ತಾನೂ ನೇಣಿಗೆ ಶರಣಾಗಿದ್ದಾನೆ. ಈ ಘಟನೆ ಬಗ್ಗೆ ಅವರ 6 ವರ್ಷದ ಮಗ ಅಕ್ಕ-ಪಕ್ಕದ ಮನೆಯವರಿಗೆ ಹೇಳಿದ್ದಾನೆ. ನಂತರ ಬ್ಯಾಡರಹಳ್ಳಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.