newsics.com
ಹೈದ್ರಾಬಾದ್ : ಟಾಲಿವುಡ್ ನಟಿ ನಿಹಾರಿಕಾ ಕೊನಿಡೇಲಾ ಅವರದು ಡಿವೋರ್ಸ್ ವಿಚಾರ ಎಲ್ಲರಿಗೂ ಗೊತ್ತೇ ಇದೆ. ವಿಚ್ಛೇದನ ಹೊಂದಿ ಸರಿಯಾಗಿ ವರ್ಷವೂ ಆಗಿಲ್ಲ, ಆಗಲೇ ಇನ್ನೊಂದು ಮದುವೆ ಮಾಡಿಕೊಳ್ಳುವ ವಿಚಾರ ಕೈಗೆತ್ತಿಕೊಂಡಿದ್ದಾರೆ ಎನ್ನಾಲಾಗುತ್ತಿದೆ.
ಸಿನಿಮಾ ನಿರ್ಮಾಣಕ್ಕೂ ಸೈ ಎಂದಿರುವ ನಿಹಾರಿಕಾ, “ಪಿಂಕ್ ಎಲಿಫೆಂಟ್ ಪಿಕ್ಚರ್ಸ್” ಎಂಬ ಬ್ಯಾನರ್ ನಿರ್ಮಿಸಿ ಒಟಿಟಿ ವೆಬ್ ಸೀರೀಸ್ ಗಳನ್ನು ಶುರುಮಾಡಿದ್ದಾರೆ. ಸದ್ಯಕ್ಕೆ ಸಾಗು ಎಂಬ ಸಿನಿಮಾ ಮುಗಿಸಿ ಅದರ ಪ್ರಚಾರದಲ್ಲಿ ಬ್ಯುಸಿ ಅಗಿದ್ದಾರೆ. ಈ ಸಿನಿಮಾ ಈಗ ಒಟಿಟಿಯಲ್ಲಿ ಬಿಡುಗಡೆಯಾಗಲು ಸಿದ್ದವಾಗಿದೆ.
ಸಿನಿಮಾದ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿದ ನಿಹಾರಿಕಾ ನನಗೆ ಮಕ್ಕಳೆಂದರೆ ಹೆಚ್ಚು ಪ್ರೀತಿ. ನಿಹಾರಿಕಾ ಅವರನ್ನು ಮತ್ತೆ ಮದುಮಗಳಾಗಿ ನೋಡಬಹುದೇ ಎಂಬ ನಿರೂಉಪಕರ ಪ್ರಶ್ನೆಗೆ, ನಿಹಾರಿಕಾ ಅವರು ಈ ಜೀವನ ಚಕ್ರದಲ್ಲಿ ಮದುವೆ ಅಥವಾ ಮಕ್ಕಳನ್ನೂ ಹೊಂದುವುದರ ಬಗ್ಗೆ ಮುಂದೆ ಏನು ಬೇಕಾದರು ಆಗಬಹುದಯು. ಪ್ರೀತಿ ಪ್ರೇಮದ ಬಗ್ಗೆ ನನಗೆ ಯಾವುದೇ ನೆಗೆಟಿವ್ ಭಾವನೆ ಇಲ್ಲ ಎನ್ನುತ್ತಾರೆ. ಅಲ್ಲದೆ ಯಾವುದೇ ಸಂಬಂದಗಳು ಮುಂದುವರಿಯದೆ ಇರಲು ಕಾರಣ ಬೇರೆ ಬೇರೆ ಯಾಗಿರುತ್ತದೆ. ಅಷ್ಟಕ್ಕೆ ಮುಂದೆಂದು ಜೀವನದಲ್ಲಿ ನಮಗೆ ಪ್ರೀತಿ ಸಿಗುವುದಿಲ್ಲ ಎಂದುಕೊಳ್ಳುವುದು ತಪ್ಪು ಅಂತ ನಿಹಾರಿಕಾ ಹೇಳಿದ್ದಾರೆ.