Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಮಹಿಳೆಯರ ತೊಡೆ ದಪ್ಪ ಇರಲು ಕಾರಣವೇನು ಗೊತ್ತಾ ?
ಆರೋಗ್ಯಲೈಫ್‌ಸ್ಟೈಲ್

ಮಹಿಳೆಯರ ತೊಡೆ ದಪ್ಪ ಇರಲು ಕಾರಣವೇನು ಗೊತ್ತಾ ?

Share
2 Min Read
SHARE

newsics.com

ಬೆಂಗಳೂರು :ಮಹಿಳೆಯರ ತೊಡೆ ದಪ್ಪ ಇರಲು ಕಾರಣವೇನು? ನಿಜಕ್ಕೂ ಇಷ್ಟೊಂದು ಪ್ರಯೋಜನವಿದ್ಯಾ?  ಇಂಟರೆಸ್ಟಿಂಗ್ ವಿಷಯವೊಂದು ಅಧ್ಯಯನದಿಂದ ಬಹಿರಂಗಗೊಂಡಿದೆ.

ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ ಪುರುಷರು ಎಂಡ್ರಾಯ್ಡ್ ಪ್ಯಾಟರ್ನ್ ಮತ್ತು ಮಹಿಳೆಯರು ಜಿನಾಯ್ಡ್ ಪ್ಯಾಟರ್ನ್ ಹೊಂದಿರುತ್ತಾರೆ. ಇದನ್ನು ಕಂಟ್ರೋಲ್ ಮಾಡಲು ಹೋಗಬಾರದು. ಏಕೆಂದರೆ ಇದು ಮಹಿಳೆಯರು ತಾಯಿಯಾಗುವ ಪ್ರಕ್ರಿಯೆಯಿಂದ  ಹಿಡಿದು ಮಹಿಳೆಯರ ಶರೀರದ ಮಾದರಿಗೆ ಅನುಗುಣವಾಗಿ ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಮಹಿಳೆಯರಲ್ಲಿ ಸಹಜವಾಗಿ ಆಸ್ಟ್ರೋಜನ್ (astrogen) ಪ್ರಮಾಣ ಜಾಸ್ತಿ ಇರುತ್ತದೆ. ಇದರಿಂದ ತೊಡೆಗಳು ದಪ್ಪವಾಗಿ ಇರಲು ಕಾರಣವಾಗಿದೆ. ಆಸ್ಟ್ರೋಜನ್ ಮಹಿಳೆಯರಲ್ಲಿ ಮುಟ್ಟು ಉಂಟು ಮಾಡಲು, ಸ್ತನಗಳ ಬೆಳವಣಿಗೆಗೆ ಸಹಾಯವಾಗಲಿದೆ. ಅಷ್ಟೇ ಅಲ್ಲದೇ ಗರ್ಭಿಣಿಯಾಗಲು ಕೂಡ ಇದು ನೆರವಾಗಲಿದೆ. ಮಾಸಿಕ ಋತುಸ್ರಾವದಲ್ಲಿ ಸಮಲೋತನ ಕಾಪಾಡಿಕೊಳ್ಳುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ. ಇವೆಲ್ಲಾ ಕಾರಣಗಳಿಂದ ಮಹಿಳೆಯರಲ್ಲಿ ನೈಸರ್ಗಿಕದತ್ತವಾಗಿ ತೊಡೆಗಳು ದಪ್ಪ ಇರುತ್ತವೆ. ಆದ್ದರಿಂದ ಮಹಿಳೆಯರು ದಪ್ಪ ತೊಡೆ ಇದ್ದರೆ ಅದನ್ನು ವರದಾನ ಎಂದುಕೊಳ್ಳಬೇಕು.  ಆದರೆ ಬೊಜ್ಜು ಬೆಳೆದರೆ ಮಾತ್ರ ಅದು ಅಪಾಯಕಾರಿಯಾಗುತ್ತದೆ.

ರಟ್ಜರ್ಸ್ ನಾರ್ತ್ ಅಮೆರಿಕನ್ ಡಿಸೀಸ್ ಇಂಟರ್ವೆನ್ಷನ್ ಅಧ್ಯಯನ ನಡೆಸಿತ್ತು. ಅದರಲ್ಲಿ ಕೂಡ ಇದನ್ನೇ ಹೇಳಲಾಗಿದೆ.  ತೊಡೆಯ ಭಾಗದಲ್ಲಿ ಅಧಿಕ ಕೊಬ್ಬನ್ನು ಹೊಂದಿರುವವರಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆಯು ಕಡಿಮೆ ಪ್ರಮಾಣದಲ್ಲಿ ಇರುತ್ತದೆ.  ಈ ಅಧ್ಯಯನಕ್ಕಾಗಿ  ಆರು ಸಾವಿರ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.  ಮೂರು ವಿಧದ ಅಧಿಕ ರಕ್ತದೊತ್ತಡವನ್ನು ಪರೀಕ್ಷಿಸಲಾಗಿತ್ತು. ಇವರೆಲ್ಲರೂ ತ್ತು 60 ವರ್ಷ ವಯೋಮಿತಿಗಿಂತ ಕೆಳಗಿನವರಾಗಿದ್ದರು. ಅವರಲ್ಲಿ ಅಧಿಕ ರಕ್ತದೊತ್ತಡ ಇರುವವರನ್ನು ಹಾಗೂ ಕಡಿಮೆ ರಕ್ತದೊತ್ತಡ ಇರುವವರು ಯಾರು? ಎನ್ನುವುದನ್ನು ಸಹ ಪರೀಕ್ಷಿಸಲಾಯಿತು. ನಂತರ ಅವರ ದೇಹದಲ್ಲಿ ಕೊಬ್ಬಿನ ಪ್ರಮಾಣ ಹಾಗೂ ಅಂಗಾಂಗಗಳ ಪರೀಕ್ಷೆಯನ್ನು ನಡೆಸಲಾಯಿತು.

ತೊಡೆಯ ಭಾಗದಲ್ಲಿ ಕಡಿಮೆ ಪ್ರಮಾಣ ಇರುವವರಿಗಿಂತ ಅಧಿಕ ಕೊಬ್ಬನ್ನು ಹೊಂದಿದವರಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಶೇ.61ರಷ್ಟು ಕಡಿಮೆ ಸಾಧ್ಯತೆಗಳಿವೆ ಎನ್ನುವುದು ತಿಳಿದು ಬಂದಿದೆ. ತೊಡೆಯಲ್ಲಿ ಅಧಿಕ ಕೊಬ್ಬನ್ನು ಹೊಂದಿದವರಲ್ಲಿ ಡಯಾಸ್ಟೋಲಿಕ್ ಅಧಿಕ ರಕ್ತದೊತ್ತಡ ಅಥವಾ ಸಿಸ್ಟೊಲಿಕ್ ಅಧಿಕ ರಕ್ತದೊತ್ತಡ ಸಮಸ್ಯೆ ಇರುವುದು ತೀರಾ ವಿರಳ ಎಂದು ವರದಿ ನೀಡಿದೆ. ಸೊಂಟದ ಸುತ್ತ ಇರುವ ಕೊಬ್ಬು ಹೃದಯಕ್ಕೆ ಹಾನಿಯನ್ನು ಉಂಟುಮಾಡುವುದು. ಆದರೆ ತೊಡೆಯಲ್ಲಿರುವ ಕೊಬ್ಬುಗಳು ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುವುದು ಎಂದು ತಿಳಿಸಿದೆ

TAGGED:thick thighs women result science evolution estrogen
Share This Article
Facebook Twitter Copy Link Print
Previous Article ರೇಣುಕಾಸ್ವಾಮಿ ನನಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂದ  ಚಿತ್ರಾಲ್ ರಂಗಸ್ವಾಮಿ
Next Article ಮಹಿಳೆಗೆ ವಂಚನೆ: ಶಿವಮೊಗ್ಗ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರೆಸ್ಟ್

Popular Posts

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖಲೈಫ್‌ಸ್ಟೈಲ್

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read
ಪ್ರಮುಖಲೈಫ್‌ಸ್ಟೈಲ್

Gold Ornaments ನಿಮ್ಮ ಹಳೆಯ ಚಿನ್ನದ ಆಭರಣಗಳು ಮತ್ತೆ ಹೊಸದರಂತೆ ಹೊಳೆಯಬೇಕೇ? ಇಲ್ಲಿದೆ ಸೂಪರ್ ಟಿಪ್ಸ್

2 Min Read
ಪ್ರಮುಖಲೈಫ್‌ಸ್ಟೈಲ್

Home Decor ನಿಮ್ಮ ಮನೆಯಲ್ಲೂ ಮಳೆಗಾಲದ ಇರುವೆ-ನೊಣಗಳ ಕಾಟವೇ? ಇಲ್ಲಿದೆ ಸಿಂಪಲ್ ‘ಕಿಚನ್ ಕ್ಲೀನಿಂಗ್’ ಹ್ಯಾಕ್ಸ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?