Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > Google Gemini ಗೂಗಲ್‌ನಿಂದ ಬಂತು ಹೊಸ ಫೀಚರ್ಸ್! ಏನಿದು ಜೆಮಿನಿ…?
ಅನಾವರಣದೇಶಪ್ರಮುಖ

Google Gemini ಗೂಗಲ್‌ನಿಂದ ಬಂತು ಹೊಸ ಫೀಚರ್ಸ್! ಏನಿದು ಜೆಮಿನಿ…?

Share
2 Min Read
SHARE

newsics.com

ನವದೆಹಲಿ: ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಕೆದಾರರಿಗೆ ಗೂಗಲ್ ಇದೀಗ ಹೊಸ ಫೀಚರ್ ನೀಡಿದೆ. ಗೂಗಲ್ ಜೆಮಿನಿ ಎಐ ಮೂಲಕ ಇದೀಗ ಕೆಲಸ ಸುಲಭ ಹಾಗೂ ಸಮಯ ಕೂಡ ಉಳಿತಾಯವಾಗಲಿದೆ.

ಗೂಗಲ್ ಜೆಮಿನಿ ಬಳಕೆದಾರರಿಗೆ ಮತ್ತಷ್ಟು ಅತ್ಯಾಧುನಿಕ ಫೀಚರ್ಸ್ ನೀಡಿದೆ.

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಕೆ ಮಾಡುತ್ತಿರುವ ಎಲ್ಲಾ ಬಳಕೆದಾರರು ಪ್ರಾಂಪ್ಟ್ ನೀಡಿ ಉತ್ತರ ಪಡೆಯುತ್ತಾರೆ. ಆದರೆ ನಿಮ್ಮ ಬಳಿ ಪಿಡಿಎಫ್, ವರ್ಡ್ ಸೇರಿದಂತೆ ಇತರ ಫೈಲ್ ಡಾಕ್ಯುಮೆಂಟ್ ಇದ್ದಲ್ಲಿ ಅದರಿಂದ ಮಾಹಿತಿ ತೆಗೆಯುವುದು, ಹುಡುಕುವುದು ಹಾಗೂ ಈ ಮಾಹಿತಿಯ ಸಾರಾಂಶ ಪಡೆಯವುದು ಅಸಾಧ್ಯವಾಗಿತ್ತು. ಆದರೆ ಗೂಗಲ್ ಜೆಮಿನಿ ಇದೀಗ ಹೊಸ ಫೀಚರ್ ಮೂಲಕ ಈ ಸವಾಲಿಗೆ ಉತ್ತರ ನೀಡಿದೆ.

ನಿಮ್ಮ ಯಾವುದೇ ಡಾಕ್ಯುಮೆಂಟ್ ಫೈಲ್‌ನ್ನು ಗೂಗಲ್ ಜೆಮಿನಿಗೆ ಅಪ್ಲೋಡ್ ಮಾಡಿದರೆ ಸಾಕು. ಎಲ್ಲಾ ಮಾಹಿತಿಯನ್ನು ಜೆಮಿನಿ ಓದಿ ಸಾರಾಂಶ ನೀಡುತ್ತದೆ. ಅಥವಾ ನೀವು ಕೆಲವೇ ಪದಗಳು ಅಥವಾ ವಾಕ್ಯಗಳನ್ನು ಹುಡುಕಲು ಹೇಳಿದರೂ ಅದನ್ನೂ ಜೆಮಿನಿ ಎಐ ಮಾಡಲಿದೆ.

ಗೂಗಲ್ ಡಾಕ್ಸ್, ಪಿಡಿಎಫ್, ವರ್ಡ್ ಸೇರಿದಂತೆ ಇತರ ಫೈಲ್‌ಗಳನ್ನು ಜೆಮಿನಿ ಎಐಗೆ ಅಪ್ಲೋಡ್ ಮಾಡಿ ಉತ್ತರ ಪಡೆದುಕೊಳ್ಳಬಹುದು. ಗೂಗಲ್ ಡ್ರೈವ್ ಅಥವಾ ಲೋಕಲ್ ಫೋಲ್ಡರ್‌ನಲ್ಲಿ ಸೇವ್ ಮಾಡಿರುವ ಯಾವುದೇ ಡಾಕ್ಯುಮೆಂಟ್ ಸುಲಭವಾಗಿ ಅಪ್ಲೋಡ್ ಮಾಡಲು ಸಾಧ್ಯವಿದೆ. ಉದಾಹರಣೆಗೆ 100 ಪುಟಗಳ ಡಾಕ್ಯುಮೆಂಟ್ ಫೈಲ್‌ನಲ್ಲಿರುವ ಯಾವುದೇ ಮಾಹಿತಿ ಹುಡುಕಲು ಅಷ್ಟೂ ಓದಬೇಕು. ಅಥವಾ ಸಾಮಾನ್ಯವಾಗಿ ಫೈಂಡರ್ ಮೂಲಕ ಹುಡುಕಬೇಕು. ಆದರೆ ಇದು ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ.

ಆದರೆ ಜೆಮನಿ ಎಐನಲ್ಲಿ ಈ ಡಾಕ್ಯುಮೆಂಟ್ ಅಪ್ಲೋಡ್ ಮಾಡಿದರೆ ತಕ್ಷಣ ನಿಮಗೆ ಬೇಕಾದ ಮಾಹಿತಿಯನ್ನು ಹುಡುಕಿ ತೆಗೆದು ನೀಡಲಿದೆ. ಇದನ್ನು ಸಾರಾಂಶ ರೂಪದಲ್ಲೂ ಬೇಕಾದರೂ ನೀಡಲಿದೆ.

ಚಾಟ್‌ಜಿಪಿಟಿ ಸೇರಿದಂತೆ ಇತರ ಉಚಿತ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಸೇವೆಯಲ್ಲಿ ಡಾಕ್ಯುಮೆಂಟ್ ಅಪ್ಲೋಡ್ ಆಯ್ಕೆ ನೀಡಿಲ್ಲ. ಆದರೆ ಗೂಗಲ್ ಜೆಮಿನಿ ಈ ಆಯ್ಕೆ ನೀಡುವ ಮೂಲಕ ಬಳಕೆದಾರರಿಗೆ ಉಚಿತವಾಗಿ ಹೊಸ ಅತ್ಯಾಧುನಿಕ ಸೇವೆ ನೀಡುತ್ತಿದೆ.

ಜೆಮಿನಿ ಲೈವ್ ಚಾಟ್‌ಬಾಟ್ ಎಐ ಅಸಿಸ್ಟೆಂಟ್ ಅನ್ನು ಎಲ್ಲಾ ಆಂಡ್ರಾಯ್ಡ್ ಬಳಕೆದಾರರಿಗೂ ಗೂಗಲ್ ಉಚಿತವಾಗಿ ಕೊಡುತ್ತಿದೆ. ಈ ಮೊದಲು ಜೆಮಿನಿ ಅಡ್ವಾನ್ಸ್‌ಡ್ ಸಬ್‌ಸ್ಕ್ರೈಬರ್‌ಗಳಿಗೆ ಮಾತ್ರ ಈ ಚಾಟ್‌ಬಾಟ್ ಸಿಗುತ್ತಿತ್ತು. ಎಲ್ಲಾ ಆಂಡ್ರಾಯ್ಡ್ ಬಳಕೆದಾರರಿಗೂ ಜೆಮಿನಿ ಲೈವ್ ಚಾಟ್‌ಬಾಟ್ ಉಚಿತವಾಗಿ ಸಿಗುತ್ತದೆ ಎಂದು ಗೂಗಲ್ ಜೆಮಿನಿ ಟೀಮ್ ಎಕ್ಸ್ ಮೂಲಕ ತಿಳಿಸಿದೆ.

ಜೆಮಿನಿ ಆ್ಯಪ್‌ನಲ್ಲಿ ಇದು ಕಾಣಿಸಿಕೊಂಡ ತಕ್ಷಣ ಚಾಟ್‌ಬಾಟ್ ಅನ್ನು ಉಚಿತವಾಗಿ ಬಳಸಬಹುದು. ಈ ಚಾಟ್‌ಬಾಟ್ ಈವರೆಗೆ ಜೆಮಿನಿ ಅಡ್ವಾನ್ಸ್‌ಡ್ ಸಬ್‌ಸ್ಕ್ರೈಬರ್‌ಗಳಿಗೆ ಮಾತ್ರ ಸಿಗುತ್ತಿತ್ತು. ಆದರೆ, ಜೆಮಿನಿ ಲೈವ್ ಸದ್ಯಕ್ಕೆ ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿದೆ.

https://x.com/GeminiApp/status/1892678157406281931

Life style ಉತ್ತಮವಾದ ಮೈಕಾಂತಿಗೆ ಈ ಯೋಗ ಬೆಸ್ಟ್ ಮೆಡಿಸಿನ್

TAGGED:New Features from Google! What is Gemini AI ...?
Share This Article
Facebook Twitter Copy Link Print
Previous Article Farah Khan ಹೋಳಿ ಹಬ್ಬದ ಕುರಿತು ಅವಹೇಳನ: ನಟಿ ಫರಾ ಖಾನ್ ವಿರುದ್ಧ FIR
Next Article Health tips ನೀವು ಗರ್ಭ ಧರಿಸಲು ಸೂಕ್ತ ವಯಸ್ಸು ಯಾವುದು?

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?