newsics.com
ಮುಂಬೈ : ಸೆಲ್ಫಿ ಕೇಳುವ ನೆಪದಲ್ಲಿ ಬಂದ ಅಭಿಮಾನಿ ಅತಿರೇಕದಿಂದ ವರ್ತಿಸಿದ್ದಾನೆ. ಪೂನಂ ಪಾಂಡೆಗೆ ಬಲವಂತದಿಂದ ಕಿಸ್ ಮಾಡಲು ಪ್ರಯತ್ನಿಸಿದ್ದಾನೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ಪಾಪರಾಜಿಗಳು ಪೂನಂ ಪಾಂಡೆಯ ಫೋಟೋ ತೆಗೆಯುತ್ತಿದ್ದಾಗ ಅಭಿಮಾನಿಯೊಬ್ಬ ಸೆಲ್ಫಿ ಕೇಳಲು ಬಂದ. ಒಂದು ಅಡಿ ಅಂತರದಿಂದ ಸೆಲ್ಫಿ ನೀಡಲು ಪೂನಂ ಪಾಂಡೆ ಕೂಡ ಒಪ್ಪಿದರು. ಆದರೆ ಅಷ್ಟಕ್ಕೇ ಆ ವ್ಯಕ್ತಿ ಸುಮ್ಮನಾಗಲಿಲ್ಲ. ಇನ್ನೂ ಹತ್ತಿರ ಹತ್ತಿರ ಬರುತ್ತಾ ಪೂನಂ ಪಾಂಡೆಯ ಮುಖಕ್ಕೆ ಕಿಸ್ ಮಾಡಲು ಪ್ರಯತ್ನಿಸಿದ. ಆಗ ಪೂನಂ ಪಾಂಡೆ ಗಾಬರಿಯಾಗಿ ಓಡಿ ಹೋದರು.
ವೈರಲ್ ಆಗಿರುವ ಈ ವಿಡಿಯೋ ನೋಡಿದ ಅನೇಕರಿಗೆ ಅನುಮಾನ ಮೂಡಿದೆ. ಇದು ಬೇಕಂತಲೇ ಮಾಡಿರುವ ಡ್ರಾಮಾ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
https://www.instagram.com/reel/DGVbgKoT3xn/?igsh=Z3UxNW1rM3U0Mml4