newsics.com
ನವದೆಹಲಿ : ಟೀಂ ಇಂಡಿಯಾ ಪಾಕ್ ತಂಡವನ್ನು ಮಣಿಸುವ ವಿಶ್ವಾಸದಲ್ಲಿದ್ದಾರೆ. ಆದ್ರೆ ಕುಂಭಮೇಳದ ಖ್ಯಾತಿಯ ಐಐಟಿ ಬಾಬಾ ಹೇಳಿದ ಭವಿಷ್ಯವನ್ನು ಕೇಳಿ ಕ್ರಿಕೆಟ್ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.
ವಿಶ್ವ ಚಾಂಪಿಯನ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡದ ಪಂದ್ಯದ ಫಲಿತಾಂಶ ಏನಾಗಲಿದೆ ಎಂದು ಪ್ರಶ್ನೆ ಕೇಳಿದಾಗ ಈ ಬಾರಿ ಪಾಕಿಸ್ತಾನ ತಂಡ ಗೆಲ್ಲಲಿದೆ ಎಂದು ಹೇಳಿದ್ದಾರೆ.
ಪಾಕ್ ಭಾರತದ ಪಂದ್ಯದ ಬಗ್ಗೆ ಮಾತನಾಡಿದ ಅಭಯ ಸಿಂಗ್, ನಾನು ಈ ಹಿಂದೆಯೇ ಹೇಳಿದ್ದೇನೆ, ಭಾರತ ಈ ಬಾರಿ ಗೆಲ್ಲುವುದಿಲ್ಲ ಎಂದು. ಈಗಲೂ ಅದನ್ನೇ ಹೇಳುತ್ತಿದ್ದೇನೆ ಈ ಬಾರಿ ಭಾರತ ಗೆಲ್ಲುವುದಿಲ್ಲ ಅಂತ. ದೇವರು ದೊಡ್ಡವನೋ ನೀವು ದೊಡ್ಡವರೋ ಎಂದು ಸಂದರ್ಶಕನನ್ನು ಪ್ರಶ್ನಿಸಿದ್ದಾರೆ.
ವಿಡಿಯೋ ನೋಡಿದ ಜನರು ಸಾಮಾಜಿಕ ಜಾಲತಾಣಗಳಲ್ಲಿ ಐಐಟಿ ಬಾಬಾ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
https://twitter.com/multiversehubs/status/1892394231190126634