newsics.com
ಗಂಡ-ಹೆಂಡತಿ ಸಂಬಂಧ ಬಿಡಿಸಲಾರದ ನಂಟು ಆದರೆ ಅಷ್ಟೇ ಸೂಕ್ಷ್ಮವು ಹೌದು. ಸಂಸಾರ ಎಂದ ಮೇಲೆ ಚಿಕ್ಕ ಪುಟ್ಟ ಮುನಿಸು, ಕೋಪ ಇವೆಲ್ಲಾ ಇದ್ದೇ ಇರುತ್ತದೆ. ಆದರೆ ಗಂಡ-ಹೆಂಡತಿ ಸಂಬಂಧ ಈ ರೀತಿ ಇದ್ದರೆ ಆ ಸಂಸಾರದಲ್ಲಿ ತೊಂದರೆಗಳು ಬರಬಹುದು.
ಇಬ್ಬರು ಮಲಗಲು ಹೋಗುವಾಗ ಜೊತೆಯಾಗಿ ಹೋಗಬೇಕು,ಇಬ್ಬರು ಬೇರೆ-ಬೇರೆ ಸಮಯದಲ್ಲಿ ಮಲಗಲು ಹೋಗುವುದು, ಸಂಗಾತಿ ಮಲಗಲು ಬರುವಷ್ಟರಲ್ಲಿ ತಾವು ನಿದ್ದೆ ಹೋಗುವುದು ಇದೆಲ್ಲಾ ಪ್ರತಿದಿನ ನಡೆಯುತ್ತಿದ್ದರೆ ಅದು ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುವುದು.
ಮಲಗುವ ಕೊಣೆಗೆ ಬಂದ ಮೇಲೆ ಮೊಬೈಲ್ ಹಿಡಿಯುತ್ತಾ ಕೂರಬಾರದು. ಮೊಬೈಲ್ ಪಕ್ಕಕ್ಕೆ ಇಟ್ಟು ಸಂಗಾತಿಯ ಜೊತೆಗೆ ಮಾತನಾಡಬೇಕು, ಇಲ್ಲದಿದ್ದರೆ ಮೊಬೈಲ್ ಅಭ್ಯಾಸ ನಿಮ್ಮಿಬ್ಬರ ನಡುವಿನ ಸಂಬಂಧ ದೂರಾಗುವುದು.
ನೀವು ಎಷ್ಟೇ ಸೈಲೆಂಟ್ ವ್ಯಕ್ತಿಯಾದರೂ ಸಂಗಾತಿ ಜೊತೆಗೆ ಮಾತನಾಡಲೇ ಬೇಕು. ಸಂಗಾತಿ ಜೊತೆ ಮೌನವಾಗಿರುವುದು ನಿಮ್ಮಿಬ್ಬರ ಸಂಬಂಧವನ್ನು ದುರ್ಬಲವಾಗಿರುತ್ತದೆ. ಇಬ್ಬರ ನಡುವೆ ಸಂವಹನ ಕಡಿಮೆಯಾದಷ್ಟೂ ಸಂಬಂಧ ದುರ್ಬಲವಾಗುವುದು.
ಒಬ್ಬ ಸಂಗಾತಿ ಆಸಕ್ತಿ ವ್ಯಕ್ತಪಡಿಸಿದಾಗ ಮತ್ತೊಬ್ಬರು ಅದಕ್ಕೆ ಸ್ಪಂದಿಸದೆ ನಿರಾಸಕ್ತಿ ತೋರುವುದು ಮಾಡಿದರೆ ಇದು ಸಂಸಾರದಲ್ಲಿ ಸಮಸ್ಯೆಯನ್ನುಂಟು ಮಾಡುತ್ತದೆ. ನನಗೆ ಆಸಕ್ತಿ ಇಲ್ಲ ಎಂದು ಹೇಳುವ ಬದಲಿಗೆ ಸಂಗಾತಿಯ ಮನಸ್ಸು ಅರಿಯುವುದು ಒಳ್ಳೆಯ ಸಂಬಂಧದ ಲಕ್ಷಣವಾಗಿದೆ. ವೈವಾಹಿಕ ಬದುಕಿನಲ್ಲಿ ಲೈಂಗಿಕ ತೃಪ್ತಿ ಕೂಡ ಮುಖ್ಯ ಎಂಬುವುದನ್ನು ಮರೆಯದಿರಿ.
ಗಂಡ-ಹೆಂಡತಿ ಸಂಬಂಧ ಉಂಡು ಮಲಗುವ ತನಕ ಎಂಬ ಮಾತಿದೆ, ಆದರೆ ಎಷ್ಟೋ ದಂಪತಿಗಳು ತಿಂಗಳುಗಟ್ಟಲೆ ತಮ್ಮ ಕೋಪ ಮುಂದುವರೆಸಿಕೊಂಡು ಹೋಗುತ್ತಾರೆ. ಕೋಪ ಬರಲೇಬಾರದು ಅಂತಲ್ಲ, ಏನ ಕೋಪ, ಅಸಮಧಾನವಿದ್ದರೂ ಅದನ್ನು ಬಗೆಹರಿಸಲು ಪ್ರಯತ್ನಿಸಬೇಕು, ಮಲಗುವ ಮುನ್ನ ಪ್ರೀತಿಯಿಂದ ಅಪ್ಪುಗೆ ನೀಡಿ ಮಲಗಬೇಕು.