newsics.com
ಮುಂಬೈ :ಯುಜ್ವೇಂದ್ರ ಚಾಹಲ್ ತಮ್ಮ ಪತ್ನಿ ಧನಶ್ರೀ ವರ್ಮಾ ಇಬ್ಬರೂ ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆದಿದ್ದಾರೆ.
ಚಾಹಲ್ ಇಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಿಗೂಢ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್ ಅನ್ನು ನೋಡಿದರೆ ಚಾಹಲ್ ಅವರ ಜೀವನದಲ್ಲಿ ಏನೋ ದೊಡ್ಡ ಘಟನೆ ನಡೆದಿದೆ ಎಂಬುದನ್ನು ನಾವು ಊಹಿಸಬಹುದು. ಚಾಹಲ್ ತಮ್ಮ ಪೋಸ್ಟ್ನಲ್ಲಿ ‘ದೇವರು ನನ್ನನ್ನು ಎಷ್ಟೋ ಬಾರಿ ರಕ್ಷಿಸಿದ್ದಾನೆ, ನಾನು ಅವುಗಳನ್ನು ಸಂಖ್ಯೆಯಲ್ಲಿ ಎಣಿಸಲು ಸಹ ಸಾಧ್ಯವಿಲ್ಲ’. ಕೆಲವೊಮ್ಮೆ ದೇವರು ನನ್ನ ಅರಿವಿಗೆ ಬಾರದೆಯೋ ನನ್ನ ಜೊತೆ ನಿಂತಿದ್ದಾನೆ. ನನಗೆ ಗೊತ್ತಿಲ್ಲದಿದ್ದರೂ ನನ್ನನ್ನು ಬೆಂಬಲಿಸಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಇಬ್ಬರೂ ಬೇರೆಯಾಗಲು ಕಾರಣವೇನೆಂದು ಬಹಿರಂಗವಾಗಿಲ್ಲ. ಆದರೆ ಧನಶ್ರೀ ಮತ್ತು ಯುಜ್ವೇಂದ್ರ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಜೀವನದಲ್ಲಿ ಒಂದು ದೊಡ್ಡ ಘಟನೆ ನಡೆದಿರುವ ಬಗ್ಗೆ ಸುಳಿವು ನೀಡಿದ್ದಾರೆ. ಈಗ ಈ ಸುದ್ದಿ ದೃಢಪಟ್ಟಂತೆ ತೋರುತ್ತಿದ್ದು, ಚಾಹಲ್-ಧನಶ್ರೀ ನಡುವಿನ ದಾಂಪತ್ಯ ಜೀವನ ಕೇವಲ 4 ವರ್ಷಗಳಿಗೆ ಅಂತ್ಯಗೊಂಡಿದೆ.