newsics.com
ರಾಜಸ್ಥಾನ: ಅಜ್ಮೀರ್ ಜಿಲ್ಲೆಯಲ್ಲಿ 33 ವರ್ಷಗಳ ಹಿಂದೆ ನಡೆದ ಶಾಲಾ ಬಾಲಕಿಯರ ಮೇಲೆ ಸಾಮೂಹಿಕ ಬಲಾತ್ಕಾರ ಘಟನೆ ಮತ್ತೆ ಮರುಕಳಿಸಿದೆ.
ದೈಹಿಕ ಕಿರುಕುಳ ಹಾಗೂ ಮತಾಂತರ ಮಾಡಲು ಮುಂದಾಗಿದ್ದ ಆರೋಪಿಗಳಾದ ಸೊಹೈಲ್ ಹುಸೇನ್ ಮತ್ತು ಮೊಹಮ್ಮದ್ ಲುಕ್ಮಾನ್ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ವಿದ್ಯಾರ್ಥಿನಿಯರಿಗೆ ಮೊಬೈಲ್ ಫೋನ್ ನೀಡುವ ಆಮಿಷವೊಡ್ಡಿ ದೈಹಿಕ ಸಂಬಂಧ ಬೆಳೆಸುತ್ತಿದ್ದರು ಎಂಬುದು ಈಗ ತಿಳಿದುಬಂದಿದೆ.
ಈಗಾಗಲೇ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲರ ವಯಸ್ಸು 19 -20 ವರ್ಷ ಎಂದು ಅಂದಾಜಿಸಲಾಗಿದೆ. ಉಳಿದ 9 ಮಂದಿ ಬಂಧನಕ್ಕೆ ಬಲೆ ಬೀಸಲಾಗಿದ್ದು, 50ಕ್ಕೂ ಹೆಚ್ಚು ಕಡೆ ಪೊಲೀಸರು ದಾಳಿ ನಡೆದಿದ್ದಾರೆ. ಈ ಪ್ರಕರಣದ ಆರೋಪಿ ಕರೀಮ್, ಮೊದಲು ಹುಡುಗಿಯರ ಸ್ನೇಹ ಬೆಳೆಸುತ್ತಿದ್ದ. ಇದಾದ್ಮೇಲೆ ಸೊಹೈಲ್ ಮತ್ತು ಮೊಹಮ್ಮದ್ ರೇಟ್ ಫಿಕ್ಸ್ ಮಾಡ್ತಿದ್ರು. ಬೇರೆ ಬೇರೆ ವಾಹನ, ಮೊಬೈಲ್ ಆಸೆ ತೋರಿಸಿ ಹುಡುಗಿಯರನ್ನು ಕರೆದುಕೊಂಡು ಹೋಗ್ತಿದ್ದರು. ಹುಡುಗಿಯರಿಗೆ ದೈಹಿಕ ಶೋಷಣೆ ನೀಡಿ, ಅವರ ಬ್ರೈನ್ ವಾಶ್ ಮಾಡಿ, ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಪೀಡಿತ ಬಾಲಕಿ ಪಾಲಕರು ಆರೋಪಿಸಿದ್ದಾರೆ.
ಹುಡುಗಿಯರ ಜಾತಿ ನೋಡಿ ಅವರ ರೇಟ್ ಫಿಕ್ಸ್ ಆಗ್ತಿತ್ತು ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಬ್ರಾಹ್ಮಣ ಹುಡುಗಿಯರ ಬೆಲೆ 20 ಲಕ್ಷವಾದ್ರೆ, ದಲಿತ ಹುಡುಗಿಯರ ಬೆಲೆ 10 ಲಕ್ಷ. ನಾಲ್ಕರಿಂದ ಐದು ಹುಡುಗಿಯರ ಪಾಲಕರು ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.