newsics.com
ಮೈಸೂರು : ಚಾಮುಂಡೇಶ್ವರಿ ದೇಗುಲಕ್ಕೆ ಬಹುಭಾಷಾ ನಟಿ ರೋಜಾ ಅವರು ಭೇಟಿ ಕೊಟ್ಟಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.
ರಾಜಕಾರಣಿಯಾಗಿಯೂ ಗುರುತಿಸಿಕೊಂಡಿರುವ ರೋಜಾ ಮೈಸೂರಿಗೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಆಂಧ್ರಪ್ರದೇಶದ ಮಾಜಿ ಮಂತ್ರಿಯೂ ಆಗಿರುವ ನಟಿ ರೋಜಾ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿ ಬಳಿಕ ಅರ್ಚಕರಿಂದ ತಾಯಿಗೆ ಹಾಕಿದ್ದ ಬ್ಲೌಸ್ ಪೀಸ್, ಹಸಿರು ಬಳೆ ಪಡೆದುಕೊಂಡಿದ್ದಾರೆ.
ನಟಿ ರೋಜಾ ಅವರು ಕನ್ನಡದಲ್ಲಿ ಗಡಿಬಿಡಿ ಗಂಡ, ಕಲಾವಿದ, ಪರ್ವ, ಮೌರ್ಯ ಸೇರಿದಂತೆ ಕನ್ನಡ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.