newsics.com
ಬೆಂಗಳೂರು : ಬಿಗ್ ಬಾಸ್’ ಬ್ರೋ ಗೌಡ ಖ್ಯಾತಿಯ ಶಮಂತ್ ಈಗ ಎಂಗೇಜ್ ಆಗಿದ್ದಾರೆ. ತಮ್ಮ ಹುಡುಗಿಯನ್ನು ಪರಿಚಯಿಸಿದ್ದಾರೆ. ಈ ಕುರಿತಾದ ಫೋಟೋ ವೈರಲ್ ಆಗಿದೆ.
ಮೇಘನಾ ಎಂಬವರನ್ನು ಮದುವೆಯಾಗಲಿದ್ದಾರೆ ನಟ. ಅವರ ಸೋಷಿಯಲ್ ಮಿಡಿಯಾ ಪ್ರೊಪೈಲ್ ಪ್ರಕಾರ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ.
ಶಮಂತ್ ಬ್ರೋ ಗೌಡ, ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಜನಪ್ರಿಯತೆ ಗಳಿಸಿದ ನಂತರ, ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಹೀರೋ ಆಗಿ ಮಿಂಚುತ್ತಿದ್ದಾರೆ.
ಬ್ರೋ ಗೌಡ ಎಂದೇ ಹೆಸರಾಗಿರುವ ಶಮಂತ್ ಜನಪ್ರಿಯ ಗಾಯಕ ಮತ್ತು ನಟ. ಮೂಲತಃ ಬೆಂಗಳೂರಿನವರಾದ ಇವರು, ಭಗವಾನ್ ಮಹಾವೀರ ಜೈನ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಪಡೆದಿದ್ದಾರೆ.