ಮುಂಬೈ: ನಟಿ ಹನ್ಸಿಕಾ ಮೊಟ್ವಾನಿ ಮದುವೆ ಬಳಿಕ ಸಖತ್ ಸ್ಲಿಮ್ ಆಗಿದ್ದಾರೆ. ಹನ್ಸಿಕಾ ಮೊಟ್ವಾನಿ ಟ್ರೆಂಡಿಷನಲ್ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿದ್ದಾರೆ.
ಟ್ರೆಡಿಷನಲ್ ಲುಕ್ ಡ್ರೆಸ್‌ನಲ್ಲಿ ಕಾಣಿಸಿಕೊಂಡ ಹನ್ಸಿಕಾ ಮೊಟ್ವಾನಿ ಡ್ರೆಸ್ಗೆ ಗೋಲ್ಡ್ ಜ್ಯುವೆಲ್ಲರಿ ಧರಿಸಿ ಮಿಂಚುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ನಟಿ ಹನ್ಸಿಕಾ ಮೋಟ್ವಾನಿ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ.
ಹನ್ಸಿಕಾ ಮೋಟ್ವಾನಿ ಅವರು 2022ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಹುಕಾಲದ ಗೆಳೆಯ ಸೊಹೈಲ್ ಕಥುರಿಯಾ ಜೊತೆ ಮದುವೆಯಾದ ಹನ್ಸಿಕಾ, ಮದುವೆ ಬಳಿಕ ಯಾವುದೇ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಟಚ್ನಲ್ಲಿದ್ದಾರೆ.