ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಪವಿತ್ರಾ ಗೌಡ ಎ1 ಆಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಅವರು ಜೈಲು ಸೇರಿ ಇಂದಿಗೆ ಎರಡು ದಿನ ಕಳೆದಿದೆ.
ಎರಡನೇ ದಿನವಾದ ಇಂದು (ಜೂನ್ 21) ಪವಿತ್ರಾ ಗೌಡ ಅವರ ಪರಪ್ಪನ ಅಗ್ರಹಾರ ಜೈಲಿಯಲ್ಲಿ ಮಟನ್ ಊಟ ಸೇವಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲು ಮೆನುವಿನಂತೆ ಇಂದು (ಜೂನ್ 21) ನಾನ್ ವೆಜ್ ಊಟ ನೀಡಲಾಗಿದೆ.
ಆರೋಪಿಗಳಾಗಿರುವ ಪವಿತ್ರಾ ಗೌಡ ಹಾಗೂ ಇತರ ಸಹಚರರಿಗೆ ಜೈಲಿನಲ್ಲಿ ನಾನ್-ವೆಜ್ ಊಟ ಕೊಡಲಾಗಿದೆ. ಕಾರಾಗೃಹ ಸಿಬ್ಬಂದಿಯು ಮಟನ್ ಊಟ ನೀಡಿದ್ದಾರೆ. ಮೆನುವಿನ ಪ್ರಕಾರ ಮಟನ್, ಮುದ್ದೆ, ಚಪಾತಿ, ರೈಸ್ ನೀಡಲಾಗಿದೆ. ಪವಿತ್ರಾ ಗೌಡ ಮತ್ತು ಡಿ ಗ್ಯಾಂಗ್ನವರು ಬಾಡೂಟ ಸೇವಿಸಿದ್ದಾರೆ.