newsics.com
ಢಾಕಾ: ಆಪರೇಷನ್ ಡೆವಿಲ್ ಹಂಟ್ ಎಂಬ ಹೆಸರಿನಡಿ 1,308 ಜನರನ್ನು ಬಾಂಗ್ಲಾದೇಶದ ಭದ್ರತಾ ಪಡೆ ಬಂಧಿಸಿದೆ.
ಕಳೆದ ನಾಲ್ಕು ದಿನಗಳಿಂದ ಬಾಂಗ್ಲಾ ಅಶಾಂತಿಯಿಂದ ಕೂಡಿದೆ. ಮಧ್ಯಂತರ ಸರ್ಕಾರವು ‘ಎಲ್ಲಾ ದೆವ್ವಗಳನ್ನು’ ಬೇರು ಸಹಿತ ಕಿತ್ತೊಗೆಯುವವರೆಗೂ ಈ ಆಪರೇಷನ್ನ್ನು ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದೆ.
ಈ ಬಗ್ಗೆ ಮಾತನಾಡಿದ ಗೃಹ ವ್ಯವಹಾರಗಳ ಸಲಹೆಗಾರ ಎಂಡಿ ಜಹಾಂಗೀರ್ ಆಲಂ ಚೌಧರಿ , “ದೆವ್ವ’ ಎಂದರೆ ಏನು? ಅದು ದುಷ್ಟ ಶಕ್ತಿಗಳನ್ನು ಸೂಚಿಸುತ್ತದೆ. ಈ ಕಾರ್ಯಾಚರಣೆಯು ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುವ, ಕಾನೂನು ಮುರಿಯಲು, ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಮತ್ತು ಭಯೋತ್ಪಾದನಾ ಕೃತ್ಯಗಳನ್ನು ಎಸಗುವವರನ್ನು ಗುರಿಯಾಗಿರಿಸಿಕೊಂಡಿದೆ” ಎಂದು ವಿವರಿಸಿದ್ದಾರೆ.
ಢಾಕಾದ ಹೊರವಲಯದಲ್ಲಿರುವ ಅವಾಮಿ ಲೀಗ್ ನಾಯಕನ ಮನೆಯಲ್ಲಿ ನಡೆದ ಕೆಲ ವಿಧ್ವಂಸಕ ಕೃತ್ಯಗಳ ಸಂದರ್ಭದಲ್ಲಿ ವಿದ್ಯಾರ್ಥಿ ಕಾರ್ಯಕರ್ತರು ಗಾಯಗೊಂಡಿದ್ದರು. ಇದಾದ ನಂತರ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ “ಆಪರೇಷನ್ ಡೆವಿಲ್ ಹಂಟ್” ಗೆ ಆದೇಶ ನೀಡಿದೆ.
ಮಾಧ್ಯಮ ವರದಿಗಳ ಪ್ರಕಾರ, ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ನ 81 ಕಾರ್ಯಕರ್ತರನ್ನು ಢಾಕಾದ ಹೊರವಲಯದಲ್ಲಿರುವ ಗಾಜಿಪುರದಿಂದ ಬಂಧಿಸಲಾಗಿದೆ. ಈ ವೇಳೆ ಅಲ್ಲಿ ಘರ್ಷಣೆ ಕಂಡಿದ್ದು ಕೂಡಲೇ ಆಪರೇಷನ್ ಡೆವಿಲ್ ಹಂಟ್ಗೆ ಆದೇಶ ನೀಡಲು ಅಧಿಕಾರಿಗಳನ್ನು ಪ್ರೇರೇಪಿಸಿತು ಎಂದು ಹೇಳಲಾಗಿದೆ.
https://x.com/dailystarnews/status/1888189969229021461?ref_src=twsrc%5Etfw%7Ctwcamp%5Etweetembed%7Ctwterm%5E1888189969229021461%7Ctwgr%5E238d011b282f9972ab18b8c09b82477db0fc3a76%7Ctwcon%5Es1_c10&ref_url=https%3A%2F%2Fd-33207424823560916267.ampproject.net%2F2501142147000%2Fframe.html
ಮೀಸಲಾತಿ ವಿಚಾರವಾಗಿ ಭುಗಿಲೆದ್ದ ಆಕ್ರೋಶ, ವಿದ್ಯಾರ್ಥಿಗಳ ಚಳವಳಿ ಶೇಖ್ ಹಸೀನಾ ಸರ್ಕಾರವನ್ನು ಕಿತ್ತೊಗೆದು, ಅವರನ್ನು ದೇಶದಿಂದ ಹೊರಹೋಗುವಂತೆ ಮಾಡಿದೆ. ಆಗ ಆರಂಭವಾದ ಹಿಂಸಾಚಾರ ಹೊಸ ಮಧ್ಯಂತರ ಸರ್ಕಾರ ಬಂದ ಮೇಲೂ ಮುಂದುವರೆದಿದೆ. ಬಾಂಗ್ಲಾದೇಶದಲ್ಲಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರ ದಾಳಿ ಮುಂದುವರೆದಿದೆ. ಈ ನಡುವೆ ಮೊನ್ನೆ ಮೊನ್ನೆ ಬಾಂಗ್ಲಾ ದೇಶದ ಮೊದಲ ಪ್ರಧಾನಿ ನಿವಾಸದ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಲಾಗಿದೆ.
Temperature ಬೇಸಿಗೆ ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ರಣ ಬಿಸಿಲು: ಮೇನಲ್ಲಿ ಗರಿಷ್ಠ 39 ಡಿ.ಸೆ. ತಾಪ ಸಾಧ್ಯತೆ