Newsics.com
ಬೆಂಗಳೂರು:”ವಿವಾದ”ದ ಜೊತೆ ಚಾಲೆಂಜಿಂಗ್ ಸ್ಟಾರ್ ”ದರ್ಶನ್” ಅವರಿಗೆ ಇರುವ ಸಂಬಂಧ ಇಂದು ನಿನ್ನೆಯದಲ್ಲ. ವಿವಾದದ ಜೊತೆ ವರ್ಷಾನು ವರ್ಷಗಳಿಂದ ಅವಿನಾಭಾವ ಸಂಬಂಧವನ್ನ ದರ್ಶನ್ ಬೆಳೆಸಿಕೊಂಡು ಬಂದಿದ್ದಾರೆ.ಹಿಂದಷ್ಟೇ ಕಾಲಜ್ಞಾನ ಮಠದ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದರು. ಇದೀಗ ಆ ಸ್ಫೋಟಕ ಭವಿಷ್ಯ ನಿಜವಾಗಿದೆ. ಸ್ವಾಮೀಜಿಗಳು ಪ್ರಕಟಿಸಿದ್ದ ಭವಿಷ್ಯವಾಣಿಯಲ್ಲಿನ ಪ್ರತಿ ಪದಗಳೂ ದರ್ಶನ್ ಅವರ ಈಗಿನ ಬೆಳವಣಿಗೆಗಳನ್ನು ಹೇಳುತ್ತಿವೆ.
ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ತುಂಬಾನೇ ಕಷ್ಟ ಪಟ್ಟು ಮೇಲೆ ಬಂದವರು. ಅವರಲ್ಲಿನ ಪ್ರತಿಭೆ ಹಾಗೂ ಅವರು ಪಡೆದ ಪ್ರಸಿದ್ಧಿ ನಿಜಕ್ಕೂ ನಮ್ಮೆಲ್ಲರಿಗೆ ಹೆಮ್ಮೆಯ ವಿಚಾರ ಅಂದಿದ್ದರು. ಆದರೆ ಇದೇ ಸಮಯದಲ್ಲಿ ಈ ವರ್ಷ ದರ್ಶನ್ ಅವರ ಮೈಯೆಲ್ಲ ಕಣ್ಣಾಗಿರಬೇಕು ಎಂದು ಎಚ್ಚರಿಸಿದ್ದರು. ದರ್ಶನ್ ಅವರ ಸುತ್ತ ಮುತ್ತ ರಕ್ಷಣಾವಲಯ ಸೂಕ್ತ ಎಂದು ಹೇಳಿದ್ದರು ”ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು
ಕಳೆದ ಮೂರು ತಿಂಗಳ ಹಿಂದಷ್ಟೇ ಕಾಲಜ್ಞಾನ ಮಠದ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದರು.ಇದೀಗ ಆ ಸ್ಫೋಟಕ ಭವಿಷ್ಯ ನಿಜವಾಗಿದೆ. ಸ್ವಾಮೀಜಿಗಳು ಪ್ರಕಟಿಸಿದ್ದ ಭವಿಷ್ಯವಾಣಿಯಲ್ಲಿನ ಪ್ರತಿ ಪದಗಳೂ ದರ್ಶನ್ ಅವರ ಈಗಿನ ಬೆಳವಣಿಗೆಗಳನ್ನು ಹೇಳುತ್ತಿವೆ. ಈ ವರ್ಷದ ಆರಂಭದಿಂದ ಪತ್ನಿ ವಿಜಯಲಕ್ಷ್ಮೀ ಮತ್ತು ಪವಿತ್ರಾ ಗೌಡ ಅವರ ನಡುವಿನ ಸೋಷಿಯಲ್ ಮೀಡಿಯಾ ಸಮರದಿಂದ ಶುರುವಾದ ಈ ಕಾಳಗ, ದರ್ಶನ್ ಫ್ಯಾನ್ಸ್‌ಗಳಿಂದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಅವಹೇಳನವೂ ಭಾರೀ ಚರ್ಚೆಗೆ ತುಪ್ಪ ಸುರಿದಿತ್ತು. ಇದೀಗ ಕೊಲೆ ಕೇಸ್ ಮೇಲೆ ಅಂದರ್ ಆಗಿದ್ದಾರೆ ದರ್ಶನ್.
ಈ ವರ್ಷ ಅವರಿಗೆ ಅನೇಕ ರೀತಿಯಿಂದ ಶತ್ರುಗಳ ತೊಂದರೆ, ಅನಾರೋಗ್ಯ ಬಾಧೆ, ಮಾನಹಾನಿಗಳು, ಅನೇಕ ರೀತಿಯ ದುಷ್ಕ್ರತ್ಯಗಳ ಪ್ರಯೋಗದಿಂದ ನೆಮ್ಮದಿ ಹಾಳಾಗಲಿದೆ. ಆದ್ದರಿಂದ ಎಚ್ಚರಿಕೆ ವಹಿಸುವುದು ಅತ್ಯವಶ್ಯವಾಗಿದೆ. ಮತ್ತು ನಿಮ್ಮ ರಕ್ಷಣಾ ವಲಯವನ್ನು ಹೆಚ್ಚು ಮಾಡಿಕೊಳ್ಳುವುದು ಸೂಕ್ತ” ಎಂದು ಶ್ರೀ ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.