newsics.com
ಅನಿಯಮಿತ ಮುಟ್ಟು ಬಹುತೇಕ ಮಹಿಳೆಯರನ್ನು ಕಾಡುವ ಸಮಸ್ಯೆ. ಹಾರ್ಮೋನ್ ಬದಲಾವಣೆ, ಗರ್ಭಧಾರಣೆ, ಅಪೌಷ್ಟಿಕತೆ, ಒತ್ತಡ ಇದಕ್ಕೆ ಕಾರಣವಿರಬಹುದು.
ಸತತವಾಗಿ ಮುಟ್ಟು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಅಂದರೆ ವೈದ್ಯರನ್ನು ಸಂಪರ್ಕಿಸಲೇಬೇಕು. ಅದು ಅಲಕ್ಷಿಸುವ ವಿಚಾರವಲ್ಲ. ಆದರೆ, ಎಲ್ಲೋ ಅಪರೂಪಕ್ಕೆ ಆಗುತ್ತಿದ್ದರೆ ಮನೆ ಮದ್ದು ಸಾಕು.
ಕ್ಯಾರೆಟ್ : ಕ್ಯಾರೆಟ್ ನಲ್ಲಿ ಹಾರ್ಮೋನ್‌ಗಳ ಸಮತೋಲನ ಕಾಪಾಡುವ ಶಕ್ತಿ ಇದೆ. ಜ್ಯೂಸ್ ಮೂಲಕ ಸೇವಿಸಿ ಅಥವಾ ಹಾಗೇ ಸೇವಿಸಿ.
ಬಾದಾಮಿ : ನಿತ್ಯ ಬಾದಾಮಿ ಸೇವಿಸುವುದರಿಂದ ನಿಮ್ಮ ಋತುಚಕ್ರ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ.
ಅಲೋವೇರಾ : ಇದರ ರಸವನ್ನು ಸೇವಿಸುವುದರಿಂದ ಹಾರ್ಮೋನ್ ಗಳಲ್ಲಿ ಸಮತೋಲನ ಉಂಟಾಗುತ್ತದೆ. ಇದರ ಪರಿಣಾಮ ಮುಟ್ಟು ಸಮರ್ಪಕವಾಗಿ ಆಗುತ್ತದೆ.
ಪಪ್ಪಾಯ : ಹೆಚ್ಚೆಚ್ಚು ಪಪ್ಪಾಯ ಹಣ್ಣು ಸೇವಿಸಿ. ಮುಟ್ಟಿನ ಸಮಸ್ಯೆಯಿಂದ ಪಾರಾಗಲು ಇದು ಅತ್ಯುತ್ತಮ. ಬೆಳಗಿನ ಹೊತ್ತು ಸೇವಿಸಿದರೆ ಒಳ್ಳೆಯದು.
ಅರಿಶಿಣ : ದಿನಕ್ಕೆ ಎರಡು ಬಾರಿ ಬೆಚ್ಚಗಿನ ನೀರಿನ ಜೊತೆ ಅರಿಶಿಣದ ಪುಡಿ ಸೇರಿಸಿಕೊಂಡು ಕುಡಿಯಿರಿ. ಬೆಚ್ಚಗಿನ ಹಾಲಿನ ಜತೆಯೂ ಸೇವಿಸಬಹುದು. ಅದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗಳು ಹಾರ್ಮೋನ್ ಗಳನ್ನು ಬ್ಯಾಲೆನ್ಸ್ ಮಾಡುತ್ತದೆ.
Health care ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಮುಟ್ಟಿನ ಬಗ್ಗೆ ತಿಳಿಸಬೇಕು.?
Life style ಚಳಿಗಾಲದಲ್ಲಿ ಸದಾ ನಿದ್ದೆ ಮೂಡ್ ಇರುತ್ತಾ? ಅದಕ್ಕೆ ಕಾರಣ ಇದೆ
Life style ನಿಮ್ಮ ಕನಸಲ್ಲಿ ಯಾರಾದ್ರು ಮೃತಪಟ್ಟಂತೆ ಕಾಣಿಸಿದ್ರೆ ಏನಾಗುತ್ತೆ..?