newsics.com
ಪಶ್ಚಿಮ ಬಂಗಾಳ: ಹೌರಾ ಜಿಲ್ಲೆಯಲ್ಲಿ ಸಂಕ್ರೈಲ್ ಮೂಲದ ಮಹಿಳೆಗೆ ಮದುವೆಯಾಗಿ ಮಕ್ಕಳು ಇದ್ದರು. ಈಕೆಗೆ ಮದುವೆಯಾಗಿದ್ರೂ ರವಿದಾಸ್ ಅನ್ನೋನ ಜೊತೆ ಲವ್ವಿ-ಡವ್ವಿ ಇತ್ತು. ಪ್ರಿಯಕರನ ಜೊತೆ ಎಸ್ಕೇಪ್ ಆಗಲು ಈ ಮಹಿಳೆ ಗಂಡನ ಕಿಡ್ನಿ ಮಾರೋ ಪ್ಲಾನ್ ಮಾಡಿದ್ದಾಳೆ.
ಮನೆಯಲ್ಲಿ ಹಣಕಾಸಿನ ತೊಂದರೆ ಇದೆ. ಮಗಳ ಓದು, ಮದುವೆಗಾಗಿ ಹಣ ಬೇಕು ಎಂದು ಗಂಡನಿಗೆ ಕಿಡ್ನಿ ಮಾರಲು ಒತ್ತಾಯಿಸಿದ್ದಾಳೆ. ಕಿಡ್ನಿ ಮಾರಾಟ ಮಾಡಿ ಅಂತ ಪದೇ ಪದೇ ಗಂಡನಿಗೆ ಕಾಟ ಕೊಟ್ಟಿದ್ದ ಪತ್ನಿ ಮಾತನ್ನು ಈ ಬಡಪಾಯಿ ಗಂಡ ನಂಬಿದ್ದಾನೆ. ಹೆಂಡತಿ ಮಾತು ನಂಬಿದ ಗಂಡ ಕಳೆದ 3 ತಿಂಗಳ ಹಿಂದೆ ₹10 ಲಕ್ಷಕ್ಕೆ ತನ್ನ ಕಿಡ್ನಿ ಮಾರಿದ್ದಾನೆ. ಕಿಡ್ನಿಯನ್ನು ಮಾರಿ ಬಂದಿದ್ದ ಹಣವನ್ನು ಪತ್ನಿ ಕೈಗೆ ಕೊಟ್ಟಿದ್ದಾನೆ.
10 ಲಕ್ಷ ನೋಡಿದ ಮಹಿಳೆ ಕಂತೆ, ಕಂತೆ ಹಣ ತೆಗೆದುಕೊಂಡು ಎಸ್ಕೇಪ್ ಆಗಿದ್ದಾಳೆ. ತನ್ನ ಪ್ರಿಯಕರ ರವಿದಾಸ್ ಜೊತೆ ಓಡಿ ಹೋಗಿ ಬ್ಯಾಕರ್ಪುರದಲ್ಲಿ ಹೊಸ ಸಂಸಾರ ಆರಂಭಿಸಿದ್ದಾರೆ. ಬ್ಯಾಕರ್ ಪುರಕ್ಕೆ ಹೋದ ಪತಿ ಪತ್ನಿಯನ್ನ ಬಾ ಎಂದು ಕರೆದಿದ್ದಾನೆ. ನಾನು ಬರಲ್ಲ.. ಬೇಕಾದ್ರೆ ಡಿವೋರ್ಸ್ ಕೊಡ್ತೀನಿ ಎಂದು ಮಹಿಳೆ ಹೇಳಿದ್ದಾಳೆ.