newsics.com
ಅಮೆರಿಕ: ವೈದ್ಯಕೀಯ ಸಾರಿಗೆ ಜೆಟ್ ವಿಮಾನವು ಟೇಕ್ ಆಫ್ ಆದ 30 ಸೆಕೆಂಡುಗಳ ನಂತರ ರಸ್ತೆಯಲ್ಲಿ ಅಪಘಾತಕ್ಕೀಡಾದ ಘಟನೆ ಅಮೆರಿಕಾದ ಫಿಲಡೆಲ್ಫಿಯಾದಲ್ಲಿ ನಡೆದಿದೆ.
ಅಪಘಾತದಿಂದ ಅನೇಕ ಮನೆಗಳಿಗೆ ಬೆಂಕಿ ತಗುಲಿದೆ. ಇದರ ಪರಿಣಾಮವಾಗಿ ಅನೇಕ ಸಾವುನೋವುಗಳು ಸಂಭವಿಸಿವೆ ಎಂದು ವರದಿಯಾಗಿದೆ.
ಬೀಳುತ್ತಿರುವ ವಿಮಾನದ ದೃಶ್ಯಾವಳಿಗಳನ್ನು ಡೋರ್ ಬೆಲ್ ಕ್ಯಾಮೆರಾ ಸೆರೆಹಿಡಿದಿದೆ. ಈಶಾನ್ಯ ಫಿಲಡೆಲ್ಫಿಯಾ ವಿಮಾನ ನಿಲ್ದಾಣದಿಂದ ಐದು ಕಿಲೋಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ ವಿಮಾನದಲ್ಲಿ ಆರು ಜನರು ಇದ್ದರು. ಅಪಘಾತದಲ್ಲಿ ಎಲ್ಲಾ ಆರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.