newsics.com
ಮಂಗಳೂರು: ದೇಶದ ಅತಿ ಶ್ರೀಮಂತ ದೇವಸ್ಥಾನ ಖ್ಯಾತಿಯ ಕೇರಳದ ತಿರುವನಂತಪುರಂ ಅನಂತ ಪದ್ಮನಾಭ ಕ್ಷೇತ್ರದ ಪ್ರಧಾನ ಅರ್ಚಕರಾಗಿ ಬೆಳ್ತಂಗಡಿ ತಾಲೂಕಿನ ಸತ್ಯನಾರಾಯಣ ತೋಡ್ತಿಲ್ಲಾಯ ನೇಮಕಗೊಂಡಿದ್ದಾರೆ.
ಬೆಳ್ತಂಗಡಿಯ ಕೊಕ್ಕಡದ ದಿ. ಸುಬ್ರಾಯ ತೊಡ್ತಿಲ್ಲಾಯರ ಮಗನಾಗಿರುವ ಸತ್ಯನಾರಾಯಣ ತೋಡ್ತಿಲ್ಲಾಯ, ದೇವಸ್ಥಾನದಿಂದ ನೀಡಲಾಗುವ ಛತ್ರಿ ಮರ್ಯಾದೆ ಸ್ವೀಕರಿಸುವ ಮಹಾ ಪ್ರಧಾನ ಅರ್ಚಕ ಸ್ಥಾನವನ್ನು ಅಲಂಕರಿಸಲಿದ್ದಾರೆ. ಇವರ ತಂದೆ ದಿ. ಸುಬ್ರಾಯ ತೊಡ್ತಿಲ್ಲಾಯರೂ ಕೂಡ ಅನಂತ ಪದ್ಮನಾಭ ಕ್ಷೇತ್ರದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.
ಸತ್ಯನಾರಾಯಣ ತೋಡ್ತಿಲ್ಲಾಯ ಅವರು ಸಣ್ಣ ವಯಸ್ಸಿನಲ್ಲೇ ಮಹತ್ತರ ಸ್ಥಾನ ಪಡೆದುಕೊಂಡಿದ್ದಾರೆ. ಜೂ.16ರಂದು ಸತ್ಯನಾರಾಯಣ (ನಾಗೇಶ) ತೋಡ್ತಿಲ್ಲಾಯ ಅವರು ತಿರುವನಂತಪುರದ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ನೇಮಕಗೊಂಡಿದ್ದರು. ಮುಖ್ಯ ಅರ್ಚಕರಾಗಿ ನಿಯುಕ್ತಿಗೊಂಡ ಆರೇ ತಿಂಗಳಲ್ಲಿ ಸತ್ಯನಾರಾಯಣ ಅವರು ಮಹತ್ತರ ಸ್ಥಾನ ಪಡೆದಿದ್ದಾರೆ. ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದ ಆಯ್ಕೆ ಇದಾಗಿದ್ದು,
ಗುರುವಾರ(ಜ.30) ಸತ್ಯನಾರಾಯಣ ತೋಡ್ತಿಲ್ಲಾಯರವರು ಹುದ್ದೆಯ ಜವಾಬ್ದಾರಿಯನ್ನು ಸ್ವೀಕರಿಸಿದರು.
ಸತ್ಯನಾರಾಯಣ ತೋಡ್ತಿಲ್ಲಾಯ ಅವರು ಮೂಲತಃ ಕೊಕ್ಕಡ ಗ್ರಾಮದ ಬಡೆಕ್ಕರ ನಿವಾಸಿ. ಮಬಯ ತೋಡ್ತಿಲ್ಲಾಯರು ಕೂಡ 2 ವರ್ಷಗಳ ಕಾಲ ಈ ಶ್ರೀಮಂತ ದೇವಾಲಯದಲ್ಲಿ ಕಾರ್ಯನಿರ್ವಹಿಸಿದ್ದರು. ಇನ್ನು ಇವರ ಅಜ್ಜ ದಿ.ನಾರಾಯಣ ತೋಡ್ತಿಲ್ಲಾಯರು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸನ್ನಿಧಿಯಲ್ಲಿ ಹಲವು ವರ್ಷಗಳ ಕಾಲ ಪೂಜಾ ಸೇವೆ ಸಲ್ಲಿಸಿದ್ದರು.
ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ನಾರಾಯಣ ತೋಡ್ತಿಲ್ಲಾಯರು, ಪಾಲಾಲೆ ದಿ. ಸತೀಶ ಯಡಪಡಿತ್ತಾಯ ಅವರ ಬಳಿ ವೇದಾಭ್ಯಾಸ ಮಾಡಿದ್ದಾರೆ. ಇವರ ಪತ್ನಿ ಸ್ನೇಹಾ ಹಾಗೂ ಪುತ್ರ ಸೌರಭ್ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.