newsics.com
: ಗರ್ಲ್ಫ್ರೆಂಡ್ನ 4 ತಿಂಗಳ ಮಗುವನ್ನು ಸಾಯಿಸಿದ ಆರೋಪದ ಮೇಲೆ 15 ವರ್ಷದ ಹುಡುಗನನ್ನು ಗುಜರಾತ್ನಲ್ಲಿ ಬಂಧಿಸಲಾಗಿದೆ.
ಗುಜರಾತ್ನ ವಲ್ಸದ್ ಜಿಲ್ಲೆಯ ಉಮರ್ಗಮ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಗುವಿನ ತಲೆಯನ್ನು ನೆಲಕ್ಕೆ ಬಡಿದು ಸಾಯಿಸಿದ್ದಾಗಿ ಹುಡುಗ ಒಪ್ಪಿಕೊಂಡಿದ್ದಾನೆ.
15ರ ಹುಡುಗ, ಹುಡುಗಿಯನ್ನು ಮದುವೆಯಾಗಲು ಬಯಸಿದ್ದ. ಆದರೆ, ಮಗು ಹೊಂದಿರುವ ಯುವತಿಯನ್ನು ಮದುವೆಯಾಗಲು ಮನೆಯವರು ಒಪ್ಪೋದಿಲ್ಲ ಎನ್ನುವ ಭಯದಿಂದ ಗರ್ಲ್ಫ್ರೆಂಡ್ನ 4 ತಿಂಗಳ ಮಗುವನ್ನು ಸಾಯಿಸಲು ನಿರ್ಧಾರ ಮಾಡಿದ್ದ. ಯುವತಿ ಕೆಲಸಕ್ಕೆ ಹೋಗಿದ್ದಾಗ ಮಗುವನ್ನು 15 ವರ್ಷದ ಹುಡುಗ ಆರೈಕೆಯಲ್ಲಿ ಬಿಟ್ಟುಹೋಗಿದ್ದಳು. ಹುಡುಗಿ ಕೇರಳ ಮೂಲದವಳಾಗಿದ್ದು, ಒಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದರು. ಆದರೆ, ಈಕೆ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ಗಂಡ ದೂರವಾಗಿದ್ದ.
ಅಕ್ಕಪಕ್ಕದ ಮನೆಯವರ ಸಹಾಯದಿಂದ ಮಗುವಿನ ಮೃತದೇಹದ ಸಮಾಧಿ ಮಾಡಿದ್ದಳು. ಆದರೆ, ಮರುದಿನದಿಂದ ಆಕೆಯ 15 ವರ್ಷದ ಬಾಯ್ಫ್ರೆಂಡ್ ನಾಪತ್ತೆಯಾಗಿದ್ದ. ಇದರಿಂದ ಅನುಮಾನಗೊಂಡಿದ್ದ ಆಕೆ, ಪೊಲೀಸ್ ಸ್ಟೇಷನ್ಗೆ ತೆರಳಿ ಆಕಸ್ಮಿಕ ಸಾವಿನ ದೂರು ನೀಡಿದ್ದಳು. ಬಳಿಕ ಮಗುವಿನ ದೇಹವನ್ನು ಸಮಾಧಿಯಿಂದ ತೆಗೆದು, ಮರಣೋತ್ತರ ಪರೀಕ್ಷೆ ಮಾಡಿದಾಗ, ತಲೆಗೆ ಗಾಯವಾಗಿ ಮಗು ಸತ್ತಿರುವುದು ಗೊತ್ತಾಗಿದೆ. ನಂತ್ರ ಪ್ರಕರಣ ಬಯಲಿಗೆ ಬಂದಿದೆ.