Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Hot actress now nun! ಅಂದಿನ ಹಾಟ್ ಹಾಟ್ ನಟಿ ಈಗ ಸನ್ಯಾಸಿನಿ!
ದೇಶಪ್ರಮುಖಮನರಂಜನೆ

Hot actress now nun! ಅಂದಿನ ಹಾಟ್ ಹಾಟ್ ನಟಿ ಈಗ ಸನ್ಯಾಸಿನಿ!

Share
1 Min Read
SHARE

newsics.com

ಸಿನಿಮಾಗಳಲ್ಲಿ ಹಾಟ್ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಲ್ಲದೆ ಐಷಾರಾಮಿ ಜೀವನ ನಡೆಸಿದ್ದ ನಟಿ ಈಗ ಒಮ್ಮೆಲೆ ಅಧ್ಯಾತ್ಮದ ಹಾದಿ ಹಿಡಿದಿದ್ದಾರೆ.

ಕನ್ನಡದ ‘ವಿಷ್ಣುವಿಜಯ’ ಸೇರಿದಂತೆ ಹಲವು ಹಿಂದಿ, ತೆಲುಗು, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದ, 90ರ ದಶಕದಲ್ಲಿ ಹಾಟ್ ನಟಿಯಾಗಿದ್ದ ಮಮತಾ ಕುಲಕರ್ಣಿ ಈಗ ಸಾಧ್ವಿ ಆಗಿದ್ದಾರೆ.

ಅವರು ಕಿನ್ನರ ಅಖಾಡದ ಮಹಾಮಂಡಲೇಶ್ವರಿ ಆಗಿ ನೇಮಕಗೊಂಡಿದ್ದಾರೆ. ಕಿನ್ನರ ಅಖಾಡ ಅಥವಾ ಕಿನ್ನರ ಅಖಾರ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಕೊಂಡಿರುವ ತೃತೀಯ ಲಿಂಗಿಗಳ ಸಂಘವಾಗಿದೆ. 2015 ರಲ್ಲಿ ಪ್ರಾರಂಭವಾದ ಕಿನ್ನರ ಅಖಾಡ ಇದೀಗ ನಟಿ ಮಮತಾ ಕುಲಕರ್ಣಿಯನ್ನು ತಮ್ಮ ಮಹಾಮಂಡಲೇಶ್ವರಿಯನ್ನಾಗಿ ನೇಮಕ ಮಾಡಿದೆ.

ಇದೊಂದು ರೀತಿಯ ಧಾರ್ಮಿಕ ಸ್ಥಾನವಾಗಿದ್ದು ಶುಕ್ರವಾರ (ಜ.24) ಪಿಂಡ ಪ್ರಧಾನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳನ್ನು ಮಮತಾ ಕುಲಕರ್ಣಿ ಅವರಿಂದ ಮಾಡಿಸಿ ಅವರನ್ನು ಕಿನ್ನರ ಅಖಾಡದ ಮಹಾಮಂಡಲೇಶ್ವರಿಯನ್ನಾಗಿ ಮಾಡಲಾಗಿದೆ.

ಶಾರುಖ್ ಖಾನ್-ಸಲ್ಮಾನ್ ಖಾನ್ ಒಟ್ಟಿಗೆ ನಟಿಸಿದ ಮೊದಲ ಮತ್ತು ಈಗಲೂ ಕಲ್ಟ್ ಸಿನಿಮಾ ಎಂದೇ ಕರೆಸಿಕೊಳ್ಳುವ ‘ಕರಣ್ ಅರ್ಜುನ್’ ಸಿನಿಮಾದಲ್ಲಿ ಮಮತಾ ಕುಲಕರ್ಣಿ ನಾಯಕಿಯಾಗಿ ನಟಿಸಿದ್ದರು. ಮಮತಾ ಕುಲಕರ್ಣಿ, ಸಲ್ಮಾನ್ ಖಾನ್ಗೆ ಜೋಡಿಯಾಗಿದ್ದರು. ಅಲ್ಲದೆ ‘ಆಶಿಕ್ ಆವಾರ’ ಆಮಿರ್ ಖಾನ್ ಜತೆಗೆ ‘ಬಾಜಿ’, ಸೂಪರ್ ಹಿಟ್ ಸಿನಿಮಾ ‘ಚೈನಾ ಗೇಟ್’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು.

ವಿಷ್ಣುವರ್ಧನ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಒಟ್ಟಿಗೆ ನಟಿಸಿದ್ದ ‘ವಿಷ್ಣು ವಿಜಯ’ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಮಮತಾ ಕುಲಕರ್ಣಿ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸಿದ್ದರು. 2003 ರಲ್ಲಿ ಬೆಂಗಾಲಿ ಸಿನಿಮಾ ಒಂದರಲ್ಲಿ ನಟಿಸಿದ್ದ ಮಮತಾ ಕುಲಕರ್ಣಿ ನಂತರ ಚಿತ್ರರಂಗದಿಂದ ದೂರಾಗಿದ್ದರು. ಈಗ ಒಮ್ಮೆಲೆ ಅಧ್ಯಾತ್ಮದ ಹಾದಿ ಹಿಡಿದಿದ್ದಾರೆ. 2016 ರಲ್ಲಿ ಈ ನಟಿಯ ಹೆಸರು ಮಾದಕ ವಸ್ತು ಸಾ‌ಗಣೆ ಪ್ರಕರಣದಲ್ಲಿ ಕೇಳಿ ಬಂದಿತ್ತು. ಮುಂಬೈ ಪೊಲೀಸರು ನಟಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮಾಡಿದ್ದರು.

ಅಮುಲ್ ಹಾಲಿನ ದರದಲ್ಲಿ ಒಂದು ರೂ. ಇಳಿಕೆ: ಇಂದಿನಿಂದಲೇ ಜಾರಿ

ಅಕ್ರಮ ವಲಸಿಗರ ವಿರುದ್ಧ ಅಮೆರಿಕ ಕಾರ್ಯಾಚರಣೆ: ಮಿಲಿಟರಿ‌ ವಿಮಾನ ಮೂಲಕ 500ಕ್ಕೂ ಹೆಚ್ಚು‌ ಮಂದಿ ಗಡಿಪಾರು

ಅತ್ಯಾಚಾರಕ್ಕೊಳಗಾದ ಈ ಯುವತಿ ತನ್ನ ಗುಪ್ತಾಂಗದಲ್ಲಿ ಬ್ಲೇಡ್ ಇರಿಸಿಕೊಂಡಿದ್ದೇಕೆ?

TAGGED:Hot actress of 90s is now a nun!
Share This Article
Facebook Twitter Copy Link Print
Previous Article ಅಮುಲ್ ಹಾಲಿನ ದರದಲ್ಲಿ ಒಂದು ರೂ. ಇಳಿಕೆ: ಇಂದಿನಿಂದಲೇ ಜಾರಿ
Next Article ಅಜ್ಜಿಯ ಸೀರೆಯುಟ್ಟು ಕಂಗೊಳಿಸಿದ ಸಾನ್ವಿ ಸುದೀಪ್‌

Popular Posts

CM Vijay Divorce ವಿರಸ ಮರೆತು ಮತ್ತೆ ಒಂದಾಗ್ತಾರ ಸಿಎಂ ವಿಜಯ್‌-ಸಂಗೀತಾ?ವಿಜಯ್‌ ದಂಪತಿ ಒಂದಾಗಲು ಕಾರಣ ಯಾರು?

2 Min Read

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

You Might Also Like

ಕರ್ನಾಟಕಪ್ರಮುಖ

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read
ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?