newsics.com
ವಾಷಿಂಗ್ಟನ್: ಅಮೆರಿಕ ಕನಸಿನ ಬೆನ್ನತ್ತಿ ಅಕ್ರಮವಾಗಿ ಒಳನುಸುಳಿದ್ದ ಅಕ್ರಮ ವಲಸಿಗರ ಮೇಲೆ ಅಮೆರಿಕ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಡೊನಾಲ್ಡ್ ಟ್ರಂಪ್ ಆಡಳಿತವು ಪ್ರಮಾಣವಚನ ಸ್ವೀಕರಿಸಿದ ಮೂರು ದಿನಗಳಲ್ಲೇ ಬೃಹತ್ ಕಾರ್ಯಾಚರಣೆ ನಡೆಸಿದೆ. 500ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಿ ಗಡಿಪಾರು ಮಾಡಿದೆ.
ಅಂಕಿಅಂಶಗಳನ್ನು ಹಂಚಿಕೊಂಡ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್, ಯುಎಸ್ ಅಧಿಕಾರಿಗಳು 538 ಅಕ್ರಮ ವಲಸಿಗರನ್ನು ಬಂಧಿಸಿದ್ದಾರೆ. ಮಿಲಿಟರಿ ವಿಮಾನ ಬಳಸಿಕೊಂಡು ನೂರಾರು ಜನರನ್ನು ಗಡಿಪಾರು ಮಾಡಲಾಗಿದೆ ಎಂದು ಹೇಳಿದರು.
ಟ್ರಂಪ್ ಆಡಳಿತವು ಶಂಕಿತ ಭಯೋತ್ಪಾದಕರು, ಟ್ರೆನ್ ಡಿ ಅರಾಗುವಾ ಗ್ಯಾಂಗ್ನ ನಾಲ್ವರು ಸದಸ್ಯರು ಮತ್ತು ಅಪ್ರಾಪ್ತ ವಯಸ್ಕರ ವಿರುದ್ಧ ಲೈಂಗಿಕ ಅಪರಾಧಗಳಿಗೆ ಶಿಕ್ಷೆಗೊಳಗಾದ ಹಲವಾರು ಅಕ್ರಮ ನುಸುಳುಕೋರರು ಸೇರಿದಂತೆ 538 ಅಕ್ರಮ ವಲಸೆ ಅಪರಾಧಿಗಳನ್ನು ಬಂಧಿಸಿದೆ ಎಂದು ಲೀವಿಟ್ ಗುರುವಾರ ಆನ್ಲೈನ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಟ್ರಂಪ್ ಆಡಳಿತವು ನೂರಾರು ಅಕ್ರಮ ವಲಸಿಗ ಅಪರಾಧಿಗಳನ್ನು ಮಿಲಿಟರಿ ವಿಮಾನದ ಮೂಲಕ ಗಡೀಪಾರು ಮಾಡಿದೆ. ಇತಿಹಾಸದಲ್ಲಿ ಅತಿದೊಡ್ಡ ಬೃಹತ್ ಗಡಿಪಾರು ಕಾರ್ಯಾಚರಣೆಯು ನಡೆಯುತ್ತಿದೆ. ಟ್ರಂಪ್ ನೀಡಿದ್ದ ಭರವಸೆಗಳನ್ನು ಉಳಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು
Premature Childbirth ಅಮೆರಿಕ ಪೌರತ್ವಕ್ಕಾಗಿ ಭಾರತೀಯರ ಹರಸಾಹಸ: ಅವಧಿಪೂರ್ವ ಹೆರಿಗೆಗೆ ನಿರ್ಧಾರ
Vishnu’s son missing ಸತ್ಯ ಹುಡುಕಲು ಹೊರಟ ವಿಷ್ಣುವಿನ ಮಗ ನಾಪತ್ತೆ!: ಪೊಲೀಸರಿಂದ ವ್ಯಾಪಕ ಶೋಧ
Health tips ಪ್ರತಿ ದಿನ ಈ ಕೆಲಸ ಮಾಡಿದ್ರೆ ಸಾಕು, ನೀವೂ ಕೂಡ ಫಿಟ್ ಇರಬಹುದು!
SIM Card Validity ಸಿಮ್ ಕಾರ್ಡ್ ವ್ಯಾಲಿಡಿಟಿ: ಯಾವುದೇ ಹೊಸ ನಿಯಮ ಜಾರಿಗೊಳಿಸಿಲ್ಲ ಎಂದ TRAI
Mahakumba Monalisa ಕುಂಭಮೇಳ ಸುಂದರಿ ಟೆಂಟ್ಗೆ ನುಗ್ಗಿದ ಅಭಿಮಾನಿಗಳು, ಮೊನಾಲಿಸಾ ಸಹೋದರನ ಮೇಲೆ ಹಲ್ಲೆ