newsics.com
ರುದ್ರಾಕ್ಷಿ ಮಾಲೆಗಳನ್ನು ಮಾರಾಟ ಮಾಡುತ್ತಿದ್ದ ಮೊನಾಲಿಸಾ ಇದೀಗ ತನ್ನ ಸೌಂದರ್ಯದಿಂದಲೇ ಟ್ರೆಂಡಿಂಗ್ ನಲ್ಲಿದ್ದಾರೆ. ತನ್ನ ಕಣ್ಣಿನ ವಿಶಿಷ್ಟ ಸೌಂದರ್ಯದಿಂದಾಗಿ ಜನರ ಗಮನ ಸೆಳೆದಿದ್ದಾಳೆ. ಆದ್ರೆ, ಮೈಸೂರಿಗೂ ಈಕೆಯ ನಂಟು ಇದೆ.
ಮುಗ್ದ ನಗು, ಆಕರ್ಷಣೆ ತುಂಬಿದ ಮುಖ, ಮಿಂಚಿನ ಮಾತು ಎಲ್ಲರನ್ನುಮೋಡಿ ಮಾಡಿದೆ. ಹೀಗಾಗಿ ಮೊನಾಲಿಸಾ ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆಗಿದ್ದಾಳೆ. ಈಕೆಯ ನಂಟು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೂ ಇದೆ.
ಹೌದು, ಮಧ್ಯಪ್ರದೇಶದ ಇಂದೋರ್ ಮೂಲದ ಮೊನಾಲಿಸಾ ಭೋಸ್ಲೆ ಮಹಾಕುಂಭ ಮೇಳದ ತ್ರಿವೇಣಿ ಸಂಗಮದ ಬಳಿ ಮಣಿ, ಸರ , ರುದ್ರಾಕ್ಷಿ ಮಾಲೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಭೋಸ್ಲೆ ಇಡೀ ಕುಟುಂಬ ಇದೇ ವ್ಯಾಪಾರದಲ್ಲಿ ತೊಡಗಿದೆ. ಅತೀ ದೊಡ್ಡ ಜಾತ್ರೆಗಳು ಎಲ್ಲೇ ಇದ್ದರೂ ತೆರಳಿ ವ್ಯಾಪಾರ ಮಾಡುತ್ತಾರೆ. ಮೈಸೂರಿನ ದಸರಾ ಹಬ್ಬಕ್ಕೂ ಆಗಮಿಸಿ ವ್ಯಾಪಾರ ಮಾಡಿದ್ದಾರೆ.
16ರ ಹರೆಯದ ಮೊನಾಲಿಸಾ ಇದೀಗ ಸೆಲೆಬ್ರೆಟಿಯಾಗಿದ್ದಾಳೆ. ಇದು ಮೊನಾಲಿಸಾ ಮಾತ್ರವಲ್ಲ, ಇಡೀ ಕುಟುಂಬಕ್ಕೆ ಮುಳುವಾಗಿದೆ.
ಕರ್ನಾಟಕದಲ್ಲಿ ನಡೆಯುವ ವಿಶ್ವಪ್ರಸಿದ್ಧ ಆಚರಣೆಗಳಲ್ಲಿ ನಾಡ ಹಬ್ಬವಾಗಿ ಆಚರಣೆ ಮಾಡುವ ಮೈಸೂರಿನ ದಸರಾ ಮಹೋತ್ಸವ ಕೂಡ ಒಂದಾಗಿದೆ. ಈ ಮೈಸೂರು ದಸರಾ ನಡೆಯುವ ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡಿದ್ದು, ವಿಶ್ವದ ಮೂಲೆ ಮೂಲೆಗಳಿಂದ ಜನರು ಬಂದು ಈ ದರಸಾ ಮಹೋತ್ಸವ ಕಣ್ತುಂಬಿಕೊಳ್ಳುತ್ತಾರೆ.
ಇನ್ನು ಅಲೆಮಾರಿಗಳಾಗಿ ವ್ಯಾಪಾರ ಉದ್ದೇಶಕ್ಕೆ ದೇಶದ ವಿವಿಧ ಭಾಗಗಳಿಗೆ ತೆರಳುವ ಮೊನಾಲಿಸಾ ಕುಟುಂಬದವರು ಇತ್ತೀಚೆಗೆ ನಡೆದಿದ್ದ ಮೈಸೂರು ದಸರಾ ಮಹೋತ್ಸವಕ್ಕೂ ಬಂದಿದದರು ಎಂಬುದನ್ನು ಸ್ವತಃ ಅವರ ದೊಡ್ಡಪ್ಪನ ಮಗಳು ಹೇಳಿಕೊಂಡಿದ್ದಾರೆ. ನಾವು ದೇಶದಲ್ಲಿ ನಡೆಯುವ ಹಿಂದೂ ಧಾರ್ಮಿಕ ಬೃಹತ್ ಮಹೋತ್ಸವಗಳಿಗೆ ತಪ್ಪದೇ ಹೋಗುತ್ತೇವೆ. ಅಲ್ಲಿ ನಮಗೆ ಭಾರೀ ವ್ಯಾಪಾರ ವಹಿವಾಟು ಮಾಡಲು ಸಾಧ್ಯವಾಗುತ್ತದೆ ಎಂದು ಯುವತಿ ಹೇಳಿಕೊಂಡಿದ್ದಾರೆ.