newsics.com
ಯುವಕನೊಬ್ಬನ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ ಮಾಡಿದೆ.
ಹೌದು.. ಯುವಕನ ರೀಲ್ಸ್ ಒಂದು ಇನ್‌ಸ್ಟಾಗ್ರಾಮ್‌ನಲ್ಲಿ 554 ಮಿಲಿಯನ್ ವೀಕ್ಷಣೆ ಪಡೆದು ಹೊಸ ದಾಖಲೆಯನ್ನು ಮಾಡಿದೆ. ಇದರಿಂದಾಗಿ ಯುವಕ ಗಿನ್ನಿಸ್ ದಾಖಲೆ ಬರೆದಿದ್ದಾನೆ.
ಕೇರಳದ ಮೊಹಮ್ಮದ್ ರಿಜ್ವಾನ್ ಎಂಬ ಯುವಕ 2023 ರಲ್ಲಿ ತನ್ನ ಇನ್ಸ್ಟಾಗ್ರಾಮ್ ಪುಟದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದ. ಜಲಪಾತದಲ್ಲಿ ಫುಟ್ಬಾಲ್ ಆಡುತ್ತಿರುವ ವಿಡಿಯೋ ಅದು. ಪೋಸ್ಟ್ ಮಾಡಿದ 10 ನಿಮಿಷಗಳಲ್ಲಿ, ವೀಡಿಯೊ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
https://www.instagram.com/reel/CzydCF-vI9D/?igsh=dXk5MXdiemx2eGc0
ವೀಡಿಯೊವನ್ನು ಪೋಸ್ಟ್ ಮಾಡಿದ ಕೆಲವೇ ದಿನಗಳಲ್ಲಿ 92 ಲಕ್ಷ ವೀಕ್ಷಣೆಗಳನ್ನು (9.2 ಮಿಲಿಯನ್) ಮತ್ತು 42,000 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಸ್ವೀಕರಿಸಿದೆ. ಕಳೆದ ಜನವರಿ 8, 2024 ರಂದು ಇದು ದಾಖಲೆ ಎಂದು ಘೋಷಿಸಲ್ಪಟ್ಟಿತು. ನಂತರ ಅದೇ ಜಲಪಾತದಲ್ಲಿ ಗಿನ್ನೆಸ್ ವಿಶ್ವ ದಾಖಲೆಯೊಂದಿಗೆ ಯುವಕನ ನಿಂತು ವೀಡಿಯೊವನ್ನು ಹಂಚಿಕೊಂಡಿದ್ದಾನೆ.
ಮಧು ರಿಜ್ವಾನ್ ತನ್ನ 21ನೇ ವಯಸ್ಸಿನಲ್ಲೇ ವಿಶ್ವದೆಲ್ಲೆಡೆ ಚರ್ಚೆಗೆ ಗ್ರಾಸವಾಗದೆ. ತನ್ನ ಅದ್ಭುತ ಫುಟ್ಬಾಲ್ ಕೌಶಲ್ಯದಿಂದ ಅನೇಕರ ಗಮನ ಸೆಳೆದಿದ್ದಾರೆ.
TATA Bandipur edition ಬಂಡೀಪುರ ಎಡಿಶನ್ ಕಾರು ಅನಾವರಣ: ಕರ್ನಾಟಕ ಅರಣ್ಯ ಸಂಪತ್ತಿಗೆ ಟಾಟಾ ಗೌರವ
Bigg Boss Kannada ಮಾಜಿ ಗೆಳತಿ ಜೊತೆಗಿನ ರಜತ್ ಫೋಟೋ ವೈರಲ್; ದೂರು ನೀಡಿದ ಪತ್ನಿ ಅಕ್ಷಿತಾ