newsics.com
ಚೆನ್ನೈ: ತಮಿಳಿನ ಈ ಬಾರಿಯ ಬಿಗ್ ಬಾಸ್ 8ರ ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ಮುಕ್ತಾಯ ಕಂಡಿದೆ.
ಇನ್ನು ಮನರಂಜನೆ ಕಾರ್ಯಕ್ರಮಗಳ ಮೂಲಕ ಹಲವು ಟ್ವಿಸ್ಟ್ ಗಳನ್ನು ನೀಡಿ ಕುತೂಹಲ ಹುಟ್ಟಿಸಿ ವಿಜೇತರ ಹೆಸರನ್ನು ಘೋಷಣೆ ಮಾಡಲಾಗಿದೆ.
ಮುತ್ತುಕುಮಾರನ್ ಅವರು ಬಿಗ್ ಬಾಸ್ ತಮಿಳು- 8 ರ ಟ್ರೋಫಿಯನ್ನು ಗೆದ್ದಿದ್ದಾರೆ. ಸೌಂದರ್ಯ ಬಿಗ್ ಬಾಸ್ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಮುತ್ತುಕುಮಾರನ್, ಸೌಂದರ್ಯ, ವಿಶಾಲ್, ರಾಯನ್ ಮತ್ತು ಪವಿತ್ರ ಅವರು ಫಿನಾಲೆ ಸ್ಪರ್ಧಿಗಳಾಗಿದ್ದರು. ಇದರಲ್ಲಿ ಮೊದಲು ರಾಯನ್ ಅವರು ಔಟ್ ಆಗಿದ್ದಾರೆ. ಆ ಬಳಿಕ ಪವಿತ್ರ ಫಿನಾಲೆ ಟ್ರೋಫಿ ಗೆಲ್ಲುವ ಸ್ಥಾನದಿಂದ ಆಚೆ ಬಿದ್ದಿದ್ದಾರೆ. ಇದಾದ ಬಳಿಕ ಮುತ್ತುಕುಮಾರನ್ , ಸೌಂದರ್ಯ ಹಾಗೂ ವಿಶಾಲದ ನಡುವೆ ಪೈಪೋಟಿ ನಡೆದಿದೆ. ಕೊನೆಯದಾಗಿ ವಿಶಾಲ್ ಅವರು ಮೂರನೇ ಸ್ಥಾನಿಯಾಗಿ ಫಿನಾಲೆ ಓಟದಿಂದ ಹೊರಬಿದ್ದಿದ್ದಾರೆ.
ಮುತ್ತುಕುಮಾರನ್ ಕುಮಾರನ್ ತಮಿಳು ಜನರಿಗೆ ಪರಿಚಿತ ಹೆಸರು. ‘ನಾನ್ ಮುತ್ತುಕುಮಾರನ್’ ಎಂದೇ ಸೋಶಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಯೂಟ್ಯೂಬ್ ಚಾನೆಲ್ ಕೂಡ ಅದೇ ಹೆಸರನ್ನು ಹೊಂದಿದೆ.
2019ರಲ್ಲಿ ಮುತ್ತುಕುಮಾರನ್ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು. ಪರ್ಸನಲ್ ಬ್ಲಾಗ್ಸ್, ಸಿನಿಮಾ ವಿಮರ್ಶೆಯನ್ನು ಮುತ್ತುಕುಮಾರನ್ ಅಪ್ಲೋಡ್ ಮಾಡುತ್ತಿದ್ದರು. ಅವರ ಯೂಟ್ಯೂಬ್ ಗೆ 2.19 ಲಕ್ಷ ಸಬ್ ಸ್ಕೈಬರ್ಸ್ ಇದ್ದಾರೆ.