newsics.com
ನವದೆಹಲಿ : ಖೋ- ಖೋ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮುಖಾಂತರ ಭಾರತದ ಮಹಿಳಾ ಹಾಗೂ ಪುರುಷ ತಂಡಗಳು ಚಾಂಪಿಯನ್ ಪಟ್ಟವನ್ನು ಅಲಂಕರಿಸಿವೆ.
ಮಹಿಳೆಯರ ಫೈನಲ್ ಪಂದ್ಯದಲ್ಲಿ ನೇಪಾಳ ಮಹಿಳಾ ತಂಡವನ್ನು ಮಣಿಸಿದ್ದ ಭಾರತ ಮಹಿಳಾ ತಂಡ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಇದೀಗ ನಡೆದ ಪುರುಷರ ಫೈನಲ್ ಪಂದ್ಯದಲ್ಲಿ ಭಾರತದ ಪುರುಷರ ತಂಡ ನೇಪಾಳ ಪುರುಷರ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದೆ.
ವಾಸ್ತವವಾಗಿ ಈ ಟೂರ್ನಿಯ ಮೊದಲ ಪಂದ್ಯವೂ ಈ ಎರಡು ತಂಡಗಳ ನಡುವೆ ನಡೆದಿತ್ತು. ಆಗಲೂ ಟೀಂ ಇಂಡಿಯಾ ಗೆಲುವು ಸಾಧಿಸಿತ್ತು. ಇದೀಗ ನಡೆದ ಫೈನಲ್‌ನಲ್ಲಿಯೂ ಭಾರತ ತಂಡ ನೇಪಾಳವನ್ನು ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿದೆ.
ಪುರುಷರ ತಂಡ ಅಜೇಯ
ಪುರುಷರ ಖೋ-ಖೋ ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಈ ಅವಧಿಯಲ್ಲಿ ಭಾರತದ ಪುರುಷರ ತಂಡ ನೇಪಾಳ, ಪೆರು, ಬ್ರೆಜಿಲ್ ಮತ್ತು ಭೂತಾನ್‌ನೊಂದಿಗೆ ಎ ಗುಂಪಿನಲ್ಲಿತ್ತು. ಗ್ರೂಪ್ ಹಂತದಲ್ಲಿ ಟೀಂ ಇಂಡಿಯಾ ಪ್ರತಿ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಭಾರತ ತಂಡ ನೇಪಾಳವನ್ನು 42-37 ಅಂಕಗಳಿಂದ ಸೋಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಇದೀಗ ಚಾಂಪಿಯನ್ ಶಿಪ್ ಪಟ್ಟ ಅಲಂಕರಿಸಿದೆ.