Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Parappa’s Agrahara Jail ಶೀಘ್ರದಲ್ಲೇ 3 ಭಾಗಗಳಾಗಿ ವಿಂಗಡಣೆಯಾಗಲಿದೆ ಪರಪ್ಪನ ಅಗ್ರಹಾರ ಜೈಲು
ಕರ್ನಾಟಕಪ್ರಮುಖ

Parappa’s Agrahara Jail ಶೀಘ್ರದಲ್ಲೇ 3 ಭಾಗಗಳಾಗಿ ವಿಂಗಡಣೆಯಾಗಲಿದೆ ಪರಪ್ಪನ ಅಗ್ರಹಾರ ಜೈಲು

Share
2 Min Read
SHARE

newsics.com

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದ ವಿಭಜನೆಗೆ ರಾಜ್ಯ ಸರ್ಕಾರ ಅಸ್ತು ಎಂದಿದ್ದು, ಶೀಘ್ರದಲ್ಲೇ ಜೈಲು ಮೂರು ಭಾಗಗಳಾಗಿ ವಿಂಗಡಣೆಯಾಗಲಿದೆ. ಈ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ತರುವ ಜೊತೆಗೆ ಅಕ್ರಮ ಚಟುವಟಿಕೆಗೆ ಶಾಶ್ವತ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.
ಸುಮಾರು 40 ಎಕರೆ ಪ್ರದೇಶವನ್ನು ಒಳಗೊಂಡಿರುವ ಸೆಂಟ್ರಲ್ ಜೈಲಿನಲ್ಲಿ 1,068 ಸಜಾಬಂಧಿ, 3,926 ವಿಚಾರಣಾಧೀನ ಹಾಗೂ 205 ಮಹಿಳಾ ಬಂಧಿ ಸೇರಿ ಒಟ್ಟು 4,994 ಮಂದಿ ಕೈದಿಗಳಿದ್ದಾರೆ. ಭಯೋತ್ಪಾದನೆ ಸೇರಿದಂತೆ ಘೋರ ಅಪರಾಧ ಕೃತ್ಯ ಎಸಗಿರುವವರಿಗಾಗಿ ಪ್ರತ್ಯೇಕ ಹೈ ಸೆಕ್ಯೂರಿಟಿ ಕಾರಾಗೃಹವನ್ನು ಸೆಂಟ್ರಲ್ ಜೈಲಿನ ಪಕ್ಕದಲ್ಲಿ ನಿರ್ಮಿಸಲಾಗುತ್ತಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಸುವ ಸಾಮರ್ಥ್ಯ – 4,146

ಒಟ್ಟು ಇರುವ ಕೈದಿಗಳು – 4,994

ವಿಚಾರಣಾಧೀನ ಕೈದಿಗಳು – 3,926

ಶಿಕ್ಷಾಬಂಧಿಗಳು – 1,068

ಮಹಿಳಾ ಬಂಧಿಗಳು – 205

ಜೈಲು ವಿಭಜನೆಯಿಂದಾಗುವ ಅನುಕೂಲಗಳು:

ಭದ್ರತೆ ಹಾಗೂ ಅಕ್ರಮಕ್ಕೆ ಕಡಿವಾಣಕ್ಕೆ ನೆರವು ಜೈಲಿನ ಆಡಳಿತದಲ್ಲಿ ಪಾರದರ್ಶಕತೆಯಲ್ಲಿ ಸುಧಾರಣೆ

ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲಿನ ಜವಾಬ್ದಾರಿ ಹೊರೆ ಕಡಿಮ
ಇತ್ತೀಚಿನ ವರ್ಷಗಳಲ್ಲಿ ವಿವಿಧ ಕಾರಣಗಳಿಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಡಳಿತಾತ್ಮಕವಾಗಿ ಜೈಲನ್ನು ಮೂರು ಭಾಗವಾಗಿ ವಿಭಜಿಸಬೇಕೆಂದು ಕಾರಾಗೃಹ ಹಾಗೂ ಸುಧಾರಣೆ ಸೇವೆ ಇಲಾಖೆಯು ಪ್ರಸ್ತಾವನೆ ಸಲ್ಲಿಸಿತ್ತು. ಅದಕ್ಕೆ ಸರ್ಕಾರ ಅಸ್ತು ಎಂದಿದ್ದು, ಶೀಘ್ರದಲ್ಲಿ ಜೈಲು ಮೂರು ಭಾಗಗಳಾಗಿ ವಿಭಜನೆಯಾಗಲಿದೆ.
ಮೂರು ಹೋಳಾಗಿ ವಿಭಜನೆ ಆಗುವುದರಿಂದ ಅಧಿಕಾರಿ ಹಾಗೂ ಸಿಬ್ಬಂದಿಯೂ ಸಹ ಪ್ರತ್ಯೇಕವಾಗಲಿದ್ದಾರೆ. ಇದು ಜೈಲಿನ ಭದ್ರತೆ ಜೊತೆಗೆ ಪಾರದರ್ಶಕತೆಗೆ ಮುನ್ನುಡಿಯಾಗಲಿದೆ. ಹಣ ನೀಡಿದರೆ ಬೇಕಾದ ವಸ್ತುಗಳು ಹಾಗೂ ಐಷಾರಾಮಿ ಸೌಲಭ್ಯಗಳು ಸಿಗಲಿವೆ ಎಂಬ ಆರೋಪಗಳೂ ಕೇಳಿಬಂದಿದ್ದವು.

ಇತ್ತೀಚೆಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಫೋಟೋವೊಂದು ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಸದ್ಯ ಶಿಕ್ಷಾಬಂಧಿ, ವಿಚಾರಣಾಧೀನ ಕೈದಿಗಳನ್ನು ಪ್ರತ್ಯೇಕ ಬ್ಯಾರಕ್ನಲ್ಲಿ ಇರಿಸಲಾಗಿದ್ದರೂ ಊಟ, ಅಡುಗೆ ಮನೆ ಹಾಗೂ ಆಸ್ಪತ್ರೆ ಕಾರಣಕ್ಕಾಗಿ ಹೊರಗೆ ಬರಲೇಬೇಕಿದೆ. ಈ ವೇಳೆ ಸಜಾಬಂಧಿಗಳು ಹಾಗೂ ವಿಚಾರಣಾ ಕೈದಿಗಳು ಪರಸ್ಪರ ಎದುರಾಗಲಿದ್ದಾರೆ. ಇದರಿಂದ ಅಪರಾಧ ಸಂಚು ರೂಪಿಸುವ ಸಾಧ್ಯತೆಯಿದೆ. ಹೀಗಾಗಿ, ಪ್ರತ್ಯೇಕ ಮೂರು ವಿಭಾಗವಾದರೆ ವಿಚಾರಣಾಧೀನ ಕೈದಿಗಳ ವಿಭಾಗಕ್ಕೆ ಮುಖ್ಯ ಅಧೀಕ್ಷಕ, ಕೈದಿ ಹಾಗೂ ಮಹಿಳಾ ಕೈದಿ ವಿಭಾಗಗಳಿಗೆ ಎಸ್ಪಿ ದರ್ಜೆ ಅಧೀಕ್ಷರು ಮುಖ್ಯಸ್ಥರಾಗಲಿದ್ದಾರೆ. ಈ ಮೂರು ವಿಭಾಗಗಳ ಉಸ್ತುವಾರಿಯನ್ನು ಡಿಐಜಿ ವಹಿಸಲಿದ್ಧಾರೆ ಎಂದು ಮೂಲಗಳು ತಿಳಿಸಿವೆ.

TAGGED:Parappa's Agrahara Jail will soon be divided into 3 parts
Share This Article
Facebook Twitter Copy Link Print
Previous Article ಬೀದರ್ ದರೋಡೆ ಪ್ರಕರಣ‌ದಲ್ಲಿ ಬಿಹಾರಿ ಗ್ಯಾಂಗ್‌ನ ಕೈಚಳಕ
Next Article Samantha Ruth Prabhu ಸಮಂತಾಗೆ ಮತ್ತೆ ಲವ್‌‌?: ಆಡಿಯೋದಿಂದ ಗುಟ್ಟು ಬಯಲು?

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read
ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?