newsics.com
ಬೀದರ್ನಲ್ಲಿ ದರೋಡೆಕೋರರು ಹಾಡಹಗಲೇ ಎಟಿಎಂ ಸಿಬ್ಬಂದಿಗೆ ಶೂಟ್ ಮಾಡಿ ದುಡ್ಡಿನ ಸಮೇತ ಪರಾರಿಯಾಗಿದ್ದಾರೆ. ಇನ್ನು ದರೋಡೆಕೋರರ ಹಿಡಿಯೋದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಸದ್ಯ ಹಲವು ನಗರಗಳು, ನೂರಾರು ಸಿಸಿಟಿವಿಗಳನ್ನು ಪರಿಶೀಲನೆ ಮಾಡಿರುವ ಪೊಲೀಸರು ಕೊನೆಗೂ ಇದು ಯಾರ ಕೈವಾಡ ಅನ್ನೋದನ್ನ ಪತ್ತೆ ಹಚ್ಚಿದ್ದಾರೆ.
ಬೀದರ್ ದರೋಡೆ ಪ್ರಕರಣದಲ್ಲಿ ಬಿಹಾರಿ ಗ್ಯಾಂಗ್ನ ಕೈಚಳಕ ಇರೋದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಅಷ್ಟೇ ಅಲ್ಲ ದರೋಡೆ ಮಾಡಿದವರ ಸುಳಿವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ದರೋಡೆ ಮಾಡಿ ಹೋದ ಇಬ್ಬರು ಆರೋಪಿಗಳ ಪೈಕಿ ಓರ್ವನ ಹೆಸರು, ವಿಳಾಸ ಪತ್ತೆಯಾಗಿದೆ. ಬಿಹಾರ ಮೂಲದ ಅಮಿತ್ ಗ್ಯಾಂಗ್ ಈ ಕೃತ್ಯ ಎಸಗಿದ್ದು, ಬಿಹಾರದ ಮನೀಶ್ ಶೂಟ್ ಮಾಡಿ ದರೋಡೆ ಮಾಡಿರೋದು ತನಿಖೆಯಲ್ಲಿ ಪತ್ತೆಯಾಗಿದೆ.
ಬೀದರ್ನಿಂದ ಬೈಕ್ನಲ್ಲಿ ಹೋದ ಮನೀಶ್ ಹಾಗೂ ಆತನ ಸಹಚರ ಹೈದರಾಬಾದ್ ಸಮೀಪದ ಅಫ್ಜಲಗಂಜ್ನಲ್ಲಿ ಫೈರಿಂಗ್ ಮಾಡಿದ್ದಾರೆ. ಅಫ್ಜಲಗಂಜ್ ಟ್ರಾವೆಲ್ಸ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ ಬಿಹಾರಿ ಗ್ಯಾಂಗ್ ಆಟೋದಲ್ಲಿ ನಾಪತ್ತೆಯಾಗಿದ್ದಾರೆ.
ಅಫ್ಜಲ್ಗಂಜ್ನಿಂದ ಕಾಲ್ಕಿತ್ತ ದರೋಡೆಕೋರರು ಸಿಕಂದರಾಬಾದ್ ಆಟೋನಲ್ಲಿ ಹೋಗಿ ಬ್ಯಾಗ್ ಮತ್ತು ಬಟ್ಟೆಯನ್ನು ಬದಲಿಸಿದ್ದಾರೆ. ಆಗಂತುಕರು ಸಿಕಂದರಾಬಾದ್ನಿಂದ ರೈಲಿನಲ್ಲಿ ಉತ್ತರ ಭಾರತಕ್ಕೆ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಬೀದರ್ ದರೋಡೆಯಲ್ಲಿ ಬಿಹಾರದ ಮನೀಶ್ ಸುಳಿವು ಸಿಕ್ಕಿದ್ರೆ ಮತ್ತೊಬ್ಬ ಆರೋಪಿ ಹೆಸರು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಇತ್ತಿಚೇಗೆ ಬಿಹಾರದ ಇದೇ ಗ್ಯಾಂಗ್ ಛತ್ತೀಸ್ಘಡದಲ್ಲಿ 70 ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ. ಛತ್ತಿಸ್ಘಡದ ಪ್ರಕರಣಕ್ಕೂ ಬೀದರ್ ಪ್ರಕರಣಕ್ಕೂ ಸಾಮ್ಯತೆ ಇದ್ದು, ಅಮಿತ್ ಗ್ಯಾಂಗ್ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.