Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಜಲ್ಲಿಕಟ್ಟು: ಏಳು ಮಂದಿ ಸಾವು, 400ಕ್ಕೂ ಹೆಚ್ಚು ಜನರಿಗೆ ಗಾಯ
ದೇಶ

ಜಲ್ಲಿಕಟ್ಟು: ಏಳು ಮಂದಿ ಸಾವು, 400ಕ್ಕೂ ಹೆಚ್ಚು ಜನರಿಗೆ ಗಾಯ

Share
1 Min Read
SHARE

newsics.com

ತಿರುಚ್ಚಿ: ತಮಿಳುನಾಡಿನ ವಿವಿಧೆಡೆ ಜಲ್ಲಿಕಟ್ಟು ಮತ್ತು ಸಂಬಂಧಿತ ಹೋರಿ ಪಳಗಿಸುವ ಸ್ಪರ್ಧೆಗಳಲ್ಲಿ ಗುರುವಾರ ಕನಿಷ್ಠ ಏಳು ಮಂದಿ ಜೀವ ಕಳೆದುಕೊಂಡಿದ್ದು, 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮೃತಪಟ್ಟವರ ಪೈಕಿ ಆರು ಮಂದಿ ಪ್ರೇಕ್ಷಕರು. ಶಿವಗಂಗಾ ಜಿಲ್ಲೆಯ ಸಿರವಾಯಲ್ ಮಂಜುವಿರಟ್ಟು ಎಂಬಲ್ಲಿ ಹೋರಿ ತಿವಿದು ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮಧುರೈನಲ್ಲಿ ನಡೆದ ಅಲಂಗನಲ್ಲೂರು ಜಲ್ಲಿಕಟ್ಟು ಸ್ಪರ್ಧೆ ವೀಕ್ಷಿಸಲು ಆಗಮಿಸಿದ್ದ ಪ್ರೇಕ್ಷಕನೊಬ್ಬ ಮೃತಪಟ್ಟಿದ್ದರೆ, ಕೇಂದ್ರ ಜಿಲ್ಲೆಗಳಲ್ಲಿ ಆಯೋಜಿಸಿದ್ದ ಇತರ ಜಲ್ಲಿಕಟ್ಟು ಸ್ಪರ್ಧೆಗಳಲ್ಲಿ ಐವರು ಮೃತಪಟ್ಟಿದ್ದಾರೆ.

ಕೃಷ್ಣಗಿರಿ ಜಿಲ್ಲೆಯ ಬಸ್ತಲಪಲ್ಲಿ ಎಂಬಲ್ಲಿ ಆಯೋಜಿಸಿದ್ದ ಎರಥು ವಿಡಂ ವಿಳಾ ಎಂಬ ಹೋರಿ ಓಟದಲ್ಲಿ 30 ವರ್ಷದ ವ್ಯಕ್ತಿ ಅಸುನೀಗಿದರೆ, ಸೇಲಂ ಜಿಲ್ಲೆಯ ಸೆಂಥರಪಟ್ಟಿ ಎಂಬಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ 45 ವರ್ಷದ ವ್ಯಕ್ತಿ ಜೀವ ಕಳೆದುಕೊಂಡಿದ್ದಾರೆ.

ಮತ್ತೊಂದು ಘಟನೆಯಲ್ಲಿ ಸಿರವಾಯಲ್ ಸ್ಪರ್ಧಾ ಸ್ಥಳದಿಂದ ಓಡಿದ ಎತ್ತನ್ನು ಹಿಡಿಯಲು ಪ್ರಯತ್ನಿಸಿದ ಹೋರಿಯ ಮಾಲೀಕ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಪದುಕೊಟ್ಟೈ, ಕರೂರು ಮತ್ತು ತಿರುಚ್ಚಿ ಜಿಲ್ಲೆಗಳಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆ ವೇಳೆ 156 ಮಂದಿ ಗಾಯಗೊಂಡಿದ್ದಾರೆ. ಸಿರವಾಯಲ್ ನಲ್ಲಿ ಮೃತಪಟ್ಟ ವ್ಯಕ್ತಿಯನ್ನು ದೇವಕೊಟ್ಟೈನ ಎಸ್.ಸುಬ್ಬಯ್ಯ ಎಂದು ಗುರುತಿಸಲಾಗಿದೆ. ಪ್ರಸಿದ್ಧ ಅಲಂಗನಲ್ಲೂರು ಜಲ್ಲಿಕಟ್ಟುವಿನಲ್ಲಿ 17 ಮಂದಿ ಹೋರಿ ಮಾಲೀಕರು ಮತ್ತು 33 ಮಂದಿ ಪ್ರೇಕ್ಷಕರು ಸೇರಿ 76 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಮೆಟ್ಟುಪಟ್ಟಿಯಿಂದ ಜಲ್ಲಿಕಟ್ಟು ವೀಕ್ಷಿಸಲು ಆಗಮಿಸಿದ್ದ ಪಿ.ಪೆರಿಸ್ವಾಮಿ (56) ಚಿಕಿತ್ಸೆಗೆ ಸ್ಪಂದಿಸದೇ ಅಸು ನೀಗಿದರು.

ಒದುರಂಪಟ್ಟಿಯ ಎಸ್.ಪೆರುಮಾಳ್ (70) ಎಂಬ ವ್ಯಕ್ತಿ ಮಂಗಲದೇವನಪಟ್ಟಿ ಎಂಬಲ್ಲಿ ಬಸ್‌ಗೆ ಕಾಯುತ್ತಿದ್ದರು. ಆಗ ಸ್ಪರ್ಧಾಕಣದಿಂದ ಓಡಿಬಂದ ಎತ್ತು ಡಿಕ್ಕಿ ಹೊಡೆದು ಅವರು ಮೃತಪಟ್ಟರು.

ಪುದುಕೊಟ್ಟೈ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಅವರನ್ನು ತಕ್ಷಣ ಸಾಗಿಸಲಾಯಿತಾದರೂ, ಅವರು ಆ ವೇಳೆಗಾಗಲೇ ಮೃತಪಟ್ಟಿದ್ದನ್ನು ವೈದ್ಯರು ಘೋಷಿಸಿದರು. 607 ಎತ್ತುಗಳು ಮತ್ತು 300 ಮಂದಿ ಪಳಗಿಸುವವರು ಇದ್ದ ಈ ಕಾರ್ಯಕ್ರಮದಲ್ಲಿ 10 ಮಂದಿ ಗಾಯಗೊಂಡಿದ್ದಾರೆ.

TAGGED:Jallikattu: Seven deadmore than 400 injured
Share This Article
Facebook Twitter Copy Link Print
Previous Article ಆಲೂಗಡ್ಡೆ ಮೊಳಕೆಯೊಡೆಯದಂತೆ ಸಂಗ್ರಹಿಸಿಡುವುದು ಹೇಗೆ?
Next Article ಸಿಎಂ‌ ಮುಡಾ ಪ್ರಕರಣ: ಇಡಿಯಿಂದ 300 ಕೋಟಿ ರೂ. ಮೌಲ್ಯದ 142 ಸ್ಥಿರಾಸ್ತಿ ಜಪ್ತಿ

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?