newsics.com
ಬೆಂಗಳೂರು : ಸ್ಯಾಂಡಲ್ವುಡ್ನ ಹಿರಿಯ ನಟರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಮಹಾಲಕ್ಷ್ಮಿ ಲೇಔಟ್ನ ಸರಿಗಮ ವಿಜಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಇಂದು ರಾತ್ರಿ ಸರಿಗಮ ವಿಜಿ ಅವರ ಮನೆಯ ಬಳಿಯೇ ಪಾರ್ಥಿವ ಶರೀರ ಇರಲಿದ್ದು ಬೆಳಗ್ಗೆ 9 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ನಮನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ನಾಳೆಯೇ ಸರಿಗಮ ವಿಜಿ ಅವರ ಅಂತ್ಯಕ್ರಿಯೆ ಮಾಡಲು ಕುಟುಂಬಸ್ಥರು, ಆಪ್ತರು ನಿರ್ಧಾರ ಮಾಡಿದ್ದಾರೆ. ಕುಟುಂಬಸ್ಥರು ಈ ಬಗ್ಗೆ ಮಾತನಾಡಿದ್ದು, ಇಂದು ರಾಜ್ಯದ ನಾನಾ ಕಡೆಗಳಿಂದ ಸಮುದಾಯದ ಆಪ್ತರು, ಸಂಬಂಧಿಕರು ಬರೋ ಕಾರಣದಿಂದ ಇಂದು ಅಂತ್ಯ ಸಂಸ್ಕಾರ ಮಾಡಿಲ್ಲ.
ನಾಳೆ ಬೆಳಗ್ಗೆ 10 ಗಂಟೆಯಿಂದ 11ರ ತನಕ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ನಾಳೆ ಮಧ್ಯಾಹ್ನದ ಒಳಗೆ ಬಲಿಜ ಜನಾಂಗದ ಸಂಪ್ರದಾಯದಂತೆ ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದಿದ್ದಾರೆ.