newsics.com
ಬಿಹಾರ: ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭಧರಿಸುವಂತೆ ಮಾಡಿದರೆ ಭರ್ಜರಿ 10 ಲಕ್ಷ ರು. ನೆರವು ನೀಡುವುದಾಗಿ ವಂಚಿಸುತ್ತಿದ್ದ ಜಾಲವೊಂದು ಬಿಹಾರದಲ್ಲಿ ಸಕ್ರಿಯವಾಗಿದ್ದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಪ್ರಿನ್ಸ್ ರಾಜ್, ಭೋಲಾ ಕುಮಾರ್ ಮತ್ತು ರಾಹುಲ್ ಕುಮಾರ್ ಎಂದು ಗುರುತಿಸಲಾಗಿದೆ.
ನವಾಡ ಜಿಲ್ಲೆಯೆ ಕಹುರಾ ಗ್ರಾಮದ ವಂಚಕರ ತಂಡವೊಂದು ಜಾಲತಾಣಗಳ ಮೂಲಕ ‘ಆಲ್ ಇಂಡಿಯಾ ಪ್ರಗ್ನೆಂಟ್ ಜಾಬ್ ಸರ್ವೀಸ್’ ಎಂಬ ಕೆಲಸದ ಆಫರ್ ನೀಡಿತ್ತು. ಕೆಲಸ ಬಹಳ ಸುಲಭವಾಗಿದ್ದು. ನಾನಾ ಕಾರಣಗಳಿಂದ ಮಕ್ಕಳಾಗದ ಮಹಿಳೆಯರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಅವರು ಗರ್ಭಧರಿಸುವಂತೆ ಮಾಡುವುದು. ಒಂದು ವೇಳೆ ಮಹಿಳೆಯರು ಗರ್ಭಧರಿಸಿದರೆ 10 ಲಕ್ಷ ರು. ನೀಡಲಾಗುವುದು. ಒಂದು ವೇಳೆ ಗರ್ಭ ಧರಿಸಲು ವಿಫಲವಾದರೂ 50000 ರು. ಖಚಿತ ಎಂದು ಭರವಸೆ ನೀಡಲಾಗಿತ್ತು.
ಮೇಲ್ಕಂಡ ಆಫರ್ ಮೂಲಕ ಅಮಾಯಕರನ್ನು ಗುಂಪು ಸೆಳೆಯುತ್ತಿತ್ತು. ಬಂಧನದ ಸಮಯದಲ್ಲಿ ಆರು ಸ್ಮಾರ್ಟ್‌ಫೋನ್‌ಗಳು ಮತ್ತು ಹಲವಾರು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಂಚನೆಯಿಂದ ಪೀಡಿತ ಮಹಿಳೆಯರ ನಿಖರ ಸಂಖ್ಯೆ ಇನ್ನೂ ತಿಳಿದಿಲ್ಲ. ಆದರೆ, ಬಿಹಾರ ಪೊಲೀಸರು ಶೀಘ್ರದಲ್ಲೇ ವಿವರಗಳನ್ನು ಬಹಿರಂಗಪಡಿಸುವುದಾಗಿ ಮತ್ತು ಕದ್ದ ಹಣವನ್ನು ಸಂತ್ರಸ್ತರಿಗೆ ಹಿಂದಿರುಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ. ರಾಕೆಟ್ ತನ್ನ ನೆಟ್‌ವರ್ಕ್ ಅನ್ನು ಕನಿಷ್ಠ ಐದರಿಂದ ಹತ್ತು ರಾಜ್ಯಗಳಲ್ಲಿ ಹರಡಿದೆ ಎಂದು ಅಂದಾಜಿಸಲಾಗಿದೆ.
ಇತ್ತೀಚೆಗೆ ಹೀಗೆ ಭಾರೀ ಉದ್ಯೋಗದ ಅವಕಾಶ ನಂಬಿ ಹಣ ಕೊಟ್ಟ ವ್ಯಕ್ತಿಯೊಬ್ಬ ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.