newsics.com
ಹುಬ್ಬಳ್ಳಿ : ಪ್ರೇಯಸಿಯೊಂದಿಗೆ ಮನಸ್ತಾಪ ಮಾಡಿಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಪ್ರೇಯಸಿಯ ಖಾಸಗಿ ವಿಡಿಯೋ, ಫೋಟೋ ಹಾಗೂ ವಾಟ್ಸಪ್ ಚಾಟ್ ಸಾಮಾಜಿ ಜಾಲತಾಣಗಳಲ್ಲಿ ಹರಿಬಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ನನ್ನ ಸಾವಿಗೆ ಸಂಜನಾ ಕಾರಣ ಎಂದು ತಾಯಿ ವಾಯ್ಸ್ ಮೆಸೇಜ್ ಕಳುಹಿಸಿ ಸಾವಿಗೆ ಶರಣಾಗಿದ್ದಾನೆ.
ಹುಬ್ಬಳ್ಳಿಯ ನವನಗರ ನಿವಾಸಿಯಾಗಿವು 27 ವರ್ಷದ ಸಂದೇಶ್ ಉಣಕಲ್ ಆತ್ಮಹತ್ಯೆಗೆ ಮಾಡಿಕೊಂಡ ಯುವಕ. ಶನಿವಾರ ಮನೆಯಿಂದ ನಾಪತ್ತೆಯಾಗಿದ್ದ ಸಂದೇಶ, ಉಣಕಲ್ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಏಕಾಏಕಿ ಸಂದೇಶ ಏಕೆ ಆತ್ಮಹತ್ಯೆ ಮಾಡಿಕೊಂಡ? ತನ್ನ ಸಾವಿಗೆ ಪ್ರೇಯಸಿ ಕಾರಣ ಎಂದು ಏಕೆ ಹೇಳಿದ್ದ? ಇಬ್ಬರ ಮಧ್ಯೆ ಏನಾದರೂ ಜಗಳವಾಗಿತ್ತಾ? ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ.