newsics.com
ಕಾಫಿ ಒಳ್ಳೆಯ ಎನರ್ಜಿ ಬೂಸ್ಟರ್. ಕಾಫಿ ಸೇವನೆಯಿಂದ ನಿದ್ದೆ ಕಣ್ಮರೆಯಾಗಿ ದೇಹ ಚುರುಕಾಗುತ್ತೆ. ಅದ್ದರಿಂದಲೇ ಹಲವರು ಆಗಾಗ ಕಾಫಿ ಕುಡಿಯುವುದನ್ನು ರೂಢಿಸಿಕೊಂಡಿದ್ದಾರೆ. ಕಾಫಿಯಿಂದ ಆರೋಗ್ಯಕ್ಕೆ ಕೆಲವು ಪ್ರಯೋಜನಗಳಿವೆ. ಆದರೆ ಸರಿಯಾದ ಸಮಯಕ್ಕೆ ಕಾಫಿ ಕುಡಿಯುವುದು ಉತ್ತಮ ಎಂಬ ಅಭಿಪ್ರಾಯ ತಜ್ಞರದು.
ಕಾಫಿಯಿಂದ ಕೆಲವು ಸೈಡ್ ಎಫೆಕ್ಟ್ಸ್‌ಗಳೂ ಇವೆ. ಕಾಫಿ ನಿದ್ದೆ ಬರಿಸೋ ನ್ಯೂರೋಟ್ರಾನ್ಸ್‌ಮಿಟರ್ ಅಡೆನೋಸಿನ್‌ನ್ನು ಕಡಿಮೆ ಮಾಡುತ್ತದೆ. ಇದರಿಂದ ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಕಾಫಿಯಲ್ಲಿರುವ ಕೆಫೀನ್ ನಿದ್ದೆ ಬರದಂತೆ ತಡೆಯುತ್ತದೆ. ಆದರೆ ಕೆಫೀನ್ ಏಕಾಗ್ರತೆ ಹೆಚ್ಚಿಸುತ್ತದೆ ಎನ್ನುತ್ತಾರೆ ಎಕ್ಸ್‌ಪರ್ಟ್ಸ್.
ಕಾರ್ಟಿಸೋಲ್ ಒಂದು ಸ್ಟ್ರೆಸ್ ಹಾರ್ಮೋನ್. ಇದು ಎನರ್ಜಿ ಕಂಟ್ರೋಲ್ ಮಾಡುತ್ತದೆ. ನಮ್ಮ ದೇಹದ ಕಾರ್ಟಿಸೋಲ್ ಲೆವೆಲ್ಸ್ ಸಿರ್ಕಾಡಿಯನ್ ರಿದಮ್ ಫಾಲೋ ಮಾಡುತ್ತೆ. ಈ ರಿದಮ್ ಬೆಳಗ್ಗೆ ಜಾಸ್ತಿ ಇರುತ್ತೆ. ಕಾರ್ಟಿಸೋಲ್ ಲೆವೆಲ್ಸ್ ಜಾಸ್ತಿ ಇರುವಾಗ ಕಾಫಿ ಕುಡಿಯಬಾರದು.
ಬೆಳಗ್ಗೆ 8 ರಿಂದ 9 ಗಂಟೆ, ಮಧ್ಯಾಹ್ನ 12 ರಿಂದ 1 ಗಂಟೆವರೆಗೆ ಕಾರ್ಟಿಸೋಲ್ ಲೆವೆಲ್ಸ್ ಜಾಸ್ತಿ ಇರುತ್ತೆ. ಈ ಟೈಮ್‌ನಲ್ಲಿ ಕಾಫಿ ಕುಡಿಯಬಾರದು. ಕುಡಿದ್ರೆ ಸೈಡ್ ಎಫೆಕ್ಟ್ಸ್ ಜಾಸ್ತಿ. ಕಾರ್ಟಿಸೋಲ್ ಲೆವೆಲ್ಸ್ ಕಡಿಮೆಯಾದ ಮೇಲೆ ಕುಡಿಯಬೇಕು. ಬೆಳಗ್ಗೆ 9:30 ರಿಂದ 11:30 ರ ನಡುವೆ ಹಾಗೂ ಮಧ್ಯಾಹ್ನ 1.30 ರಿಂದ 3ರ ನಡುವೆ ಕಾಫಿ ಕುಡಿಯಬಹುದು.
ಊಟದ ನಂತರ ಕಾಫಿ ಕುಡಿದ್ರೆ ನಿದ್ದೆ ಬರಲ್ಲ. ಆಯಾಸ ಕೂಡ ಆಗಲ್ಲ. ವರ್ಕ್‌ಔಟ್ ಮುಂಚೆ ಕೂಡ ಕಾಫಿ ಕುಡಿಯಬಹುದು. ಅಥ್ಲೀಟ್ ಅಥವಾ ಫಿಟ್ನೆಸ್ ಫ್ರೀಕ್ ಆದ್ರೆ, ಪ್ರೀ-ವರ್ಕ್‌ಔಟ್ ಆಗಿ ಕಾಫಿ ಕುಡಿದರೆ ಒಳ್ಳೆಯದು. ವರ್ಕ್‌ಔಟ್‌ಗೆ 30-40 ನಿಮಿಷ ಮುಂಚೆ ಕಾಫಿ ಕುಡಿಯಿರಿ. ಇದು ಸಹನಶಕ್ತಿ ಹೆಚ್ಚಿಸುತ್ತದೆ. ಪರ್ಫಾರ್ಮೆನ್ಸ್ ಕೂಡ ಹೆಚ್ಚುತ್ತದೆ. ದೃಷ್ಟಿ ಕೂಡ ಸುಧಾರಿಸುತ್ತದೆ.
ಬೆಳಗ್ಗೆ ಕಾಫಿ ಬದಲು ಹರ್ಬಲ್ ಟೀ ಕುಡಿಯಬಹುದು. ಇದು ಆರೋಗ್ಯಕ್ಕೆ ಒಳ್ಳೆಯದು. ಮಧ್ಯಾಹ್ನ ಕಾಫಿ ಬದಲು ಗ್ರೀನ್ ಟೀ ಕುಡಿಯಿರಿ. ಸಂಜೆ ಡೀಕಾಫಿನೇಟೆಡ್ ಕಾಫಿ ಕುಡಿದರೆ ಒಳ್ಳೆಯದು.