newsics.com
ಬೆಂಗಳೂರು: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಬಿಎಂಟಿಸಿ ಬಸ್ ತಡೆದು ಚಾಲಕನ ಮೇಲೆ ಬಿಯರ್ ಬಾಟಲ್‌ನಿಂದ ಹಲ್ಲೆ ನಡೆಸಿದ್ದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಗುರುವಾರ ಈ ಘಟನೆ ನಡೆದಿದೆ.
ಕುಡಿದ ಮತ್ತಿನಲ್ಲಿ ಪುಂಡನೋರ್ವ ಬಿಎಂಟಿಸಿ ಬಸ್ ತಡೆದಿದ್ದಲ್ಲದೆ, ಬಸ್‌ನ ಮಿರರ್ ಒಡೆದು ಚಾಲಕನ ಮೇಲೆ ಬಿಯರ್ ಬಾಟಲ್‌ನಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಚಾಲಕನ ಕೈಗೆ ಗಾಯಗಳಾಗಿವೆ.
ಬೈಕ್‌ನಲ್ಲಿ ಬಂದಿದ್ದ 40 ವರ್ಷದ ಕಿಡಿಗೇಡಿ ಈ ಕೃತ್ಯ ನಡೆಸಿದ್ದಾನೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ದುಷ್ಕರ್ಮಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
Religious Tips ಇನ್ಮುಂದೆ ಹಳೆ ಬಟ್ಟೆ ಬಿಸಾಕಬೇಡಿ; ಈ ರೀತಿ ಮಾಡಿ ಸಾಕು…
Bus caught fire ನಡು ರಸ್ತೆಯಲ್ಲೇ ಹೊತ್ತಿ ಉರಿದ ಸ್ಲೀಪರ್ ಕೋಚ್ ಬಸ್: 30 ಪ್ರಯಾಣಿಕರು ಪಾರು
Asteroid ಇಂದು ಭೂಮಿ ಸಮೀಪ ಹಾದು ಹೋಗಲಿವೆ ವಿಮಾನ ಗಾತ್ರದ 2 ಕ್ಷುದ್ರ ಗ್ರಹ