newsics.com
ಪ್ರಿಯಕರನನ್ನೇ ಪ್ರೇಯಿಸಿ ಚಾಕುವಿನಿಂದ ಇರಿದ ಘಟನೆ ಹಾಸನದ ಬಿ.ಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ನಡೆದಿದೆ.
25 ವರ್ಷದ ಮನುಕುಮಾರ್ ಎಂಬುವವರ ಸ್ಥಿತಿ ಗಂಭೀರವಾಗಿದೆ. ಹಾಸನದ ತಾಳೂಕಿನ ಎ ಗುಡುಗನಹಳ್ಳಿ ಗ್ರಾಮದ ಮನುಕುಮಾರ್ ಮತ್ತು ಭವಾನಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಮನಸ್ತಾಪ ಬಂದು ದೂರವಾಗಿದ್ದರು. ನಿನ್ನೆ ರಾತ್ರಿ ಹೊಸ ವರ್ಷಾಚರಣೆಗೆ ಸ್ನೇಹಿತರ ಜೊತೆ ಖಾಸಗಿ ಹೋಟೆಲ್ಗೆ ಮನುಕುಮಾರ್ ಬಂದಿದ್ದರು. ಪಾರ್ಟಿ ವೇಳೆ ಭವಾನಿ ಪದೇ ಪದೇ ಫೋನ್ ಮಾಡುತ್ತಿದ್ದಳು. ತಡರಾತ್ರಿ 12.30ಕ್ಕೆ ಹೋಟೆಲ್ ಬಳಿ ಭವಾನಿ ಬಂದಿದ್ದಾಳೆ.
ಅಲ್ಲೆಬಿದ್ದಿದ್ದ ಪಾಸ್ ನ್ನು ಕೊರಳಿಗೆ ಹಾಕಿಕೊಂಡು ಗೇಟ್ ಒಳಗೆ ಹೋಗಿದ್ದಾಳೆ ಭವಾನಿ. ಅಷ್ಟರಲ್ಲಿ ಗೇಟ್ ಹತ್ತಿರ ಬಂದಿದ್ದಾನೆ ಮನುಕುಮಾರ್. ಈ ವೇಳೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಜಗಳ ಬಿಡಿಸಲು ಅಂತ ಮನುಕುಮಾರ್ ಗೆಳೆಯರು ಬಂದಿದ್ದಾರೆ. ಇದೇ ವೇಳೆ ಏಕಾಏಕಿ ಚಾಕುವಿನಿಂದ ಮನು ಕುಮಾರ್ ಗೆ ಭವಾನಿ ಇರಿದಿದ್ದಾಳೆ.
ಸದ್ಯ ಮನುಕುಮಾರ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಆರೋಗ್ಯ ಸ್ಥಿತಿ ತುಂಬಾ ಗಂಭೀರವಿದೆ ಎಂದು ತಿಳಿದು ಬಂದಿದೆ. ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.