newsics.com
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಚೆನ್ನೈ ಮೂಲದ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ (ಸಿವಶ್ರೀ) ಜತೆ ಮುಂದಿನ ಮಾರ್ಚ್ 4ರಂದು ಹಸೆಮಣೆ ಏರಲಿದ್ದಾರೆ ಎಂದು ವರದಿಯಾಗಿದೆ.
ಆದರೆ ಈ ಬಗ್ಗೆ ತೇಜಸ್ವಿ ಸೂರ್ಯ ಅವರು ಅಧಿಕೃತವಾಗಿ ಘೋಷಿಸಬೇಕಷ್ಟೆ. ಬಿಜೆಪಿಯ ‘ಯಂಗ್ ಆ್ಯಂಡ್ ಡೈನಾಮಿಕ್’ ಮತ್ತು ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಸಂಸದ ಎಂದೇ ಕರೆಸಿಕೊಂಡಿರುವ ತೇಜಸ್ವಿ ಸೂರ್ಯ ಅವರಿಗೆ ಮದುವೆ ಯಾವಾಗ ಎಂಬ ಪ್ರಶ್ನೆ ಹೋದಲ್ಲೆಲ್ಲ ಕಾಡುತ್ತಿತ್ತು.
ಕೊನೆಗೂ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಚೆನ್ನೈ ಮೂಲದ ಗಾಯಕಿ ಜತೆ ಅವರು ಹಸೆಮಣೆ ಏರಲಿದ್ದಾರೆ ಎಂದು ವರದಿ ಆಗಿದೆ.
ಹಲವು ಸಂದರ್ಭಗಳಲ್ಲಿ ತೇಜಸ್ವಿ ಸೂರ್ಯ ಅವರ ಬಳಿ ಮದುವೆ ಬಗ್ಗೆ ಕೇಳಿದ್ದರೂ ಅವರು ಈ ವಿಚಾರವಾಗಿ ಬಾಯ್ಬಿಟ್ಟಿರಲಿಲ್ಲ, ಆದರೀಗ ಸದ್ದಿಲ್ಲದೇ, ಹಸೆಮಣೆ ಏರಲು ಸಿದ್ಧತೆ ನಡೆಸಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಅವರು ಇದೀಗ ಗಾಯಕಿ, ಭರತನಾಟ್ಯ ಕಲಾವಿದೆಯಾಗಿರುವ ಚೆನ್ನೈ ಮೂಲದ ಶಿವಶ್ರೀ ಸ್ಕಂದ ಪ್ರಸಾದ್ ಎನ್ನುವವರನ್ನು ವರಿಸಲು ಸಜ್ಜಾಗಿದ್ದಾರೆ. ಈಗಾಗಲೇ ಎರಡೂ ಕುಟುಂಬಗಳು ಈ ವಿವಾಹಕ್ಕೆ ಒಪ್ಪಿಗೆ ನೀಡಿದ್ದು, ಮಾರ್ಚ್ 4ಕ್ಕೆ ವಿವಾಹ ನಡೆಯಲಿದೆ
ಸಿವಶ್ರೀ ಸ್ಥಂದ ಪ್ರಸಾದ್ ಅವರು ಶಾಸ್ತ್ರೀಯ ಸಂಗೀತ ಗಾಯಕಿ ಹಾಗೂ ಭರತನಾಟ್ಯ ಕಲಾವಿದೆಯಾಗಿದ್ದಾರೆ. ಬಯೋ ಎಂಜಿನಿಯರಿಂಗ್ ವಿಷಯದಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ. ಇದರೊಂದಿಗೆ ಮದ್ರಾಸ್ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂಎ ಪದವಿ, ಮದ್ರಾಸ್ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಎಂಎ ಪದವಿ ಪಡೆದುಕೊಂಡಿದ್ದಾರೆ. ಇದರೊಂದಿಗೆ ಸೈಕ್ಲಿಂಗ್, ಟ್ರೆಕ್ಕಿಂಗ್ ವಾಕಾಥಾನ್‌ಗಳಲ್ಲೂ ಆಸಕ್ತಿ ಹೊಂದಿದ್ದಾರೆ. ಸಿವಶ್ರೀ ಅವರ ಯೂಟ್ಯೂಬ್ ಚಾನೆಲ್‌ಗೆ ಸುಮಾರು ಎರಡು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.
Viral News: 18 ವರ್ಷ ಸಾಕಿ ಸಲುಹಿದ ಅಮ್ಮನಿಗೆ 2ನೇ ಮದುವೆ ಮಾಡಿಸಿದ ಮಗ
Priya Prakash Warrier ಪೂಲ್ನಲ್ಲಿ ಪೋಸ್ ಕೊಟ್ಟ ಕಣ್ಸನ್ನೆ ಚೆಲುವೆ ನೋಡಿ