newsics.com
ನವದೆಹಲಿ : ಯುವಕ ಟ್ರಾಫಿಕ್ ರೂಲ್ಸ್ಗಳನ್ನೇ ಮರೆತು ತನ್ನ ಗರ್ಲ್ಫ್ರೆಂಡ್ ಅನ್ನು ತೊಡೆ ಮೇಲೆ ಕೂರಿಸಿಕೊಂಡು, ಆಕೆಯ ಜೊತೆ ಲಿಪ್ ಲಾಕ್ ಮಾಡುತ್ತಾ ಬೇಜವಾಬ್ದಾರಿಯಿಂದ ಕಾರು ಓಡಿಸಿದ್ದಾನೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಯುವಕನೊಬ್ಬ ಟ್ರಾಫಿಕ್ ನಿಯಮಗಳನ್ನೆಲ್ಲಾ ಮುರಿದು ಲೋಕದ ಪರಿವೇ ಇಲ್ಲದೆ ತನ್ನ ಗೆಳತಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಲಿಪ್ ಲಾಕ್, ರೊಮ್ಯಾನ್ಸ್ ಮಾಡುತ್ತಾ ಬೇಜವಾಬ್ದಾರಿಯಿಂದ ಕಾರು ಓಡಿಸಿದ್ದಾನೆ.
ಈ ಕುರಿತ ವಿಡಿಯೋವೊಂದನ್ನು ಸೂರ್ಯ ರೆಡ್ಡಿ (jsuryareddy) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಆಘಾತಕಾರಿ ದೃಶ್ಯ, ಆತ ತನ್ನೊಂದಿಗೆ ಇತರರ ಪ್ರಾಣವನ್ನೂ ಪಣಕ್ಕಿಟ್ಟಿದ್ದಾನೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.