newsics.com
ಹಾಯ್ ಫ್ರೆಂಡ್ಸ್ ಅಂತ ಕೂಗಿ ರೀಲ್ಸ್ ಮಾಡುವ ರೇಶ್ಮಾ ಆಂಟಿ ಇದೀಗ ಮತ್ತೆ ವೈರಲ್ ಸುದ್ದಿಯಲ್ಲಿದ್ದಾರೆ. ಗಿಚ್ಚಿ ಗಿಲಿಗಿಲಿ ರೀ-ಲೋಡೆಡ್ಡ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಂತರ ರೇಶ್ಮಾ ಅಭಿಮಾನಿಗಳು ಹೆಚ್ಚಾಗಿದ್ದಾರೆ.
https://www.instagram.com/reel/DCw_jn9oT6k/?igsh=MzRya3NhNzluZTM4
ಹೌದು! ರಾತ್ರಿ ವೇಳೆ ವಿಧಾನಸೌಧ ಮುಂದೆ ರೇಶ್ಮಾ ಆಂಟಿ ಜೋರಾಗಿ ಕಿರುಚಿ ಕೂಗಾಡಿದ್ದಾರೆ. ‘ಹಾಯ್ ಫ್ರೆಂಡ್ಸ್ ನಾವು ಎಲ್ಲಿ ಬಂದಿದ್ದೀವಿ ಗೊತ್ತಾ?’ ಎಂದು ಹೇಳುತ್ತಾ ವಿಧಾನಸೌಧ ಮುಖ್ಯ ಧ್ವಾರದ ಮುಂದೆ ನಿಂತುಕೊಳ್ಳುತ್ತಾರೆ. ‘ಅಯ್ಯೋ ಗೇಟ್ ತೆಗೆಯಪ್ಪೋ…ಯಾರು ಇಲ್ವಾ ಯಾರೂ ಇಲ್ಲ. ನಾನು ಒಳಗಡೆ ಹೋಗಬೇಕು ಎಲ್ಲರನ್ನು ನೋಡಬೇಕು. ಚಿಕ್ಕ ಹುಡುಗಿಯಿಂದ ನನಗೆ ಈ ಆಸೆ ಇದೆ. 1ನೇ ಕ್ಲಾಸ್‌ನಿಂದ 10ನೇ ಕ್ಲಾಸ್‌ವರೆಗೂ ಬುಕ್‌ನಲ್ಲಿ ಹಾಕಿರುತ್ತಾರೆ ಅದೇ ವಿಧಾನಸೌಧ ಇದು. ಸಿದ್ದರಾಮಯ್ಯ ಸರ್ ನನ್ನ ಒಳಗೆ ಕರ್ಕೊಳ್ಳಿ ಎಂದು ಎಂದು ವಿಡಿಯೋದಲ್ಲಿ ರೇಶ್ಮಾ ಮಾತನಾಡಿದ್ದಾರೆ.
ಸದ್ಯ ಈ ವಿಡಿಯೋ ಸಖತ್ ವೈರಲ್ ಆಗ್ತಿದೆ.