newsics.com
ಬೆಂಗಳೂರು: ಡಿಜಿಟಲ್ ಅರೆಸ್ಟ್ ಮೂಲಕ ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಬರೋಬ್ಬರಿ 11.8 ಕೋಟಿ ರೂ. ವಂಚಿಸಲಾಗಿದೆ.
ವಂಚನೆಗೊಳಗಾದ ಟೆಕ್ಕಿ ವಿನಯ್ ಕುಮಾರ್ ಅವರು ರಾಜಧಾನಿ ಬೆಂಗಳೂರಿನ ಹೆಬ್ಬಾಳ ಸಮೀಪದ ಜಿಕೆವಿಕೆ ಲೇಔಟ್ ನಿವಾಸಿಯಾಗಿದ್ದು, ನವೆಂಬರ್ 25 ರಿಂದ ಡಿಸೆಂಬರ್ 15ರ ಅವಧಿಯಲ್ಲಿ ಹಣ ಕಳೆದುಕೊಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ತಾವು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರೆಂದು ಹೇಳಿಕೊಂಡು ಸೈಬರ್ ವಂಚಕರು ವಿನಯ್ ಅವರಿಗೆ ಕರೆ ಮಾಡಿದ್ದಾರೆ. ಮುಂಬೈನ ಕೊಲಾಬಾದಲ್ಲಿ ನಿಮ್ಮ ಮೇಲೆ ಪ್ರಕರಣವೊಂದು ದಾಖಲಾಗಿದೆ. ನಿಮ್ಮ ಆಧಾರ್ ಕಾರ್ಡ್ ಬಳಸಿಕೊಂಡು ಹಣ ವರ್ಗಾವಣೆಯಾಗಿದೆ. 6 ಕೋಟಿ ರೂ. ವಂಚನೆಯಾಗಿದೆ. ಈಗ ಕೇಸ್ ಸುಪ್ರೀಂ ಕೋರ್ಟ್‌ನಲ್ಲಿದೆ ಎಂದು ಹೆದರಿಸಿದ್ದಾರೆ.
ವಂಚಕರು ವಿಡಿಯೋ ಕಾಲ್ ಮಾಡಿ ಒಂದು ತಿಂಗಳ ಕಾಲ ವಿನಯ್ ಅವರನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ. ಒಂದು ತಿಂಗಳ ಕಾಲ ಮನೆಯಲ್ಲಿ ಇರದಂತೆ ಸೂಚಿಸಿದ್ದರಿಂದ ವಿನಯ್ ಅವರು ಯಲಹಂಕದ ಲಾಡ್ಜ್‌ವೊಂದರಲ್ಲಿದ್ದರು.
ವಿನಯ್ ಕುಮಾರ್ ಅವರು ಕಳೆದ ಹಲವು ವರ್ಷಗಳಿಂದ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದರು. ಇದನ್ನೇ ಟಾರ್ಗೆಟ್ ಮಾಡಿದ್ದ ಸೈಬರ್ ವಂಚಕರು ಟೆಕ್ಕಿ ವಿನಯ್ ಕುಮಾರ್ ಅವರಿಂದ ಷೇರುಗಳನ್ನು ಮಾರಾಟ ಮಾಡಿಸಿದ್ದಾರೆ. ಬಳಿಕ ಹಂತ ಹಂತವಾಗಿ ಒಂದು ತಿಂಗಳ ಕಾಲ ಅವರಿಂದ 11 ಕೋಟಿ 83 ಲಕ್ಷ ರೂ. ಗಳನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಈಶಾನ್ಯ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Samsung employees fired ಸ್ಯಾಮ್‌ಸಂಗ್ Galaxy S25+ ಸರಣಿಯ ಅಲ್ಟ್ರಾ ಫೋನ್ ಫೋಟೋ ಲೀಕ್: ಹಲವು ಉದ್ಯೋಗಿಗಳು ವಜಾ
case filed against allu arjun: ಅಲ್ಲು ಅರ್ಜುನ್ ಮೇಲೆ ಬಿತ್ತು ಮತ್ತೊಂದು ಕೇಸ್