newsics.com
ಸಕಲೇಶಪುರ(ಹಾಸನ): ತಾಲ್ಲೂಕಿನ ಹಾದಿಗೆ ಗ್ರಾಮದಲ್ಲಿ ಕಾರ್ಮಿಕರು ಸಾಕಿದ್ದ 15ಕ್ಕೂ ಹೆಚ್ಚು ನಾಟಿ ಕೋಳಿಗಳಿಗೆ ಕಿಡಿಗೇಡಿಗಳು ವಿಷವಿಟ್ಟು ಕೊಂದಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಸತ್ತು ಬಿದ್ದಿದ್ದ ಕೋಳಿಯೊಂದರ ಬಾಯಿಂದ ಬೆಂಕಿ ಹೊರಬಂದು ಅಚ್ಚರಿ ಮೂಡಿಸಿದೆ.
ಗ್ರಾಮದ ರವಿ ಹಾಗೂ ಇತರರು ಕುಟುಂಬ ನಿರ್ವಹಣೆಗೆ ನೆರವಾಗಲೆಂದು ಕೋಳಿಗಳನ್ನು ಸಾಕಿದ್ದರು. ಎಂದಿನಂತೆ ಕೂಲಿ ಕೆಲಸಕ್ಕೆ ಹೋಗಿದ್ದ ಕಾರ್ಮಿಕರು ಸಂಜೆ ಮನೆಗೆ ಬಂದು ನೋಡಿದಾಗ ಕೋಳಿಗಳು ಸತ್ತುಬಿದ್ದಿದ್ದವು. ಈ ದುಷ್ಕೃತ್ಯ ಎಸಗಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ಥ ಕೂಲಿ ಕಾರ್ಮಿಕರು ಆಗ್ರಹಿಸಿದ್ದಾರೆ.
ಅಚ್ಚರಿ ಎನ್ನುವಂತೆ ಸತ್ತುಬಿದ್ದಿರುವ ಕೋಳಿಯೊಂದರ ಬಾಯಲ್ಲಿ ಬೆಂಕಿ ಹಾಗೂ ಹೊಗೆ ಹೊರಬಂದಿದ್ದು, ಇದನ್ನು ನೋಡಲು ಸುತ್ತಮುತ್ತಲ ಜನ ತಂಡೋಪತಂಡವಾಗಿ ಬರುತ್ತಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರೂ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Kannada Sahitya Sammelana ಇಂದಿನಿಂದ ಸಕ್ಕರೆ ನಾಡಲ್ಲಿ ಅಕ್ಕರೆಯ ಅಕ್ಷರ ಜಾತ್ರೆ
Rear incident ವಿಡಿಯೋ ನೋಡಿ 9 ವರ್ಷದ ಬಾಲಕನಿಂದ 3 ವರ್ಷದ ಮಗು ಮೇಲೆ ಲೈಂ*ಗಿಕ ದೌರ್ಜನ್ಯ
Relationship ಹೆಂಡತಿಯರು ತಮ್ಮ ಗಂಡನಿಂದ ನಿಜವಾಗಿಯೂ ಏನು ಬಯಸುತ್ತಾರೆ?
ಸಿಟಿ Ravi ಬಂಧನ ಖಂಡಿಸಿ ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ಕರೆ
shower ದಂಪತಿ ಒಟ್ಟಿಗೇ ಸ್ನಾನ ಮಾಡಲು ಬಯಸುವಿರಾ? ಅದಕ್ಕೂ ಮುನ್ನ ನಿಮಗೆ ಈ ವಿಷಯ ತಿಳಿದಿರಲಿ…