newsics.com
ಬೆಂಗಳೂರು: ಲಿವರ್‌ಗೆ ಸಂಬಂಧಪಟ್ಟ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಬುಧವಾರ ಅಮೆರಿಕಾಗೆ ತೆರಳುತ್ತಿರುವ ನಟ ಶಿವರಾಜ್ ಕುಮಾರ್ ಅವರನ್ನು ಸ್ನೇಹಿತರು ಅವರ ಮನೆಗೇ ತೆರಳಿ ಶುಭ ಹಾರೈಸಿದ್ದಾರೆ.
ಹಿರಿಯ ನಟ ಕಿಚ್ಚ ಸುದೀಪ್, ಮಾಜಿ ಸಚಿವ ಬಿಸಿ ಪಾಟೀಲ್, ಸಚಿವ ಮಧು ಬಂಗಾರಪ್ಪ, ನಿರ್ಮಾಪಕ ಕಾರ್ತಿಕ್ ಗೌಡ ಸೇರಿದಂತೆ ಸೇರಿದಂತೆ ಚಿತ್ರರಂಗ, ರಾಜಕೀಯದ ಸ್ನೇಹಿತರು ಶಿವರಾಜ್ ಕುಮಾರ್ ನಿವಾಸಕ್ಕೆ ಬಂದು ಅವರಿಗೆ ಶುಭ ಹಾರೈಸಿದ್ದಾರೆ.
ಬುಧವಾರ ರಾತ್ರಿ 8.30 ಕ್ಕೆ ಪತ್ನಿ ಗೀತಾ ಜತೆ ಶಿವಣ್ಣ ಅಮೆರಿಕಾಗೆ ಪ್ರಯಾಣ ಬೆಳೆಸಲಿದ್ದಾರೆ. ಅದಕ್ಕೂ ಮೊದಲು ಸ್ನೇಹಿತರು ಅವರನ್ನು ಭೇಟಿ ಮಾಡಿ ಶುಭ ಹಾರೈಸಿ ಬೀಳ್ಕೊಟ್ಟಿದ್ದಾರೆ. ಸೌಖ್ಯವಾಗಿ ಮರಳಿ ಬರಲೆಂದು ಹಾರೈಸಿದ್ದಾರೆ.
ನಟ ವಿನೋದ್ ರಾಜ್ ಕೂಡ ಶಿವಣ್ಣನನ್ನು ಭೇಟಿಯಾಗಲು ಬಂದಿದ್ದು ತಮ್ಮ ತೋಟದಲ್ಲಿ ಬೆಳೆದ ಹಣ್ಣುಗಳನ್ನು ತಂದು ಶಿವಣ್ಣನಿಗೆ ನೀಡಿ ಆರೋಗ್ಯ ಸರಿಯಾಗಲಿ ಎಂದು ಹಾರೈಸಿದ್ದಾರೆ.
ಶಿವಣ್ಣನ ಅನಾರೋಗ್ಯದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಅನೇಕರು ಅವರಿಗೆ ಕರೆ ಮಾಡಿ ವಿಚಾರಿಸಿಕೊಂಡಿದ್ದರು. ಇದೀಗ ಅಮೆರಿಕಾಗೆ ತೆರಳುವ ಮೊದಲು ಕಾವೇರಿ ತಾಯಿಗೆ ಬಾಗಿನ, ತಿರುಪತಿ ತಿಮ್ಮಪ್ಪನಿಗೆ ಪೂಜೆ ಮಾಡಿ ಶಸ್ತ್ರಚಿಕಿತ್ಸೆಗೆ ತೆರಳುತ್ತಿದ್ದಾರೆ. ಇನ್ನು ಒಂದು ತಿಂಗಳು ಶಿವಣ್ಣ ಅವರು ಅಮೆರಿಕಾದಲ್ಲಿಯೇ ಇರಲಿದ್ದಾರೆ.
Dinga Dinga Disease ಈ ಹೊಸ ವೈರಸ್‌ಗೆ ಮಹಿಳೆಯರೇ ಟಾರ್ಗೆಟ್; ಈ ರೋಗ ಎಷ್ಟು ಅಪಾಯಕಾರಿ?
Actor Shivarajkumar ಅನಾರೋಗ್ಯದ ಹಿನ್ನೆಲೆ ಇಂದು ಅಮೆರಿಕಕ್ಕೆ ತೆರಳಲಿರುವ ನಟ ಶಿವರಾಜ್ ಕುಮಾರ್