newsics.com
ಬೆಂಗಳೂರು : ಶಾಲೆ ನಿಗದಿ ಪಡಿಸಿರುವ ಫೀಸ್ ಸರಿಯಾದ ಸಮಯಕ್ಕೆ ಕಟ್ಟಲಿಲ್ಲ ಅಂತ ಮಕ್ಕಳನ್ನು ಡಾರ್ಕ್ ರೂಮ್‌ನಲ್ಲಿ ಕೂಡಿಹಾಕಿರುವ ಆರೋಪ ಬೆಂಗಳೂರಿನ ಶಾಲೆಯ ವಿರುದ್ಧ ಕೇಳಿಬಂದಿದೆ.
ಹೌದು, ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಪ್ರತಿಷ್ಠಿತ ಖಾಸಗಿ ಶಾಲೆ ಆರ್ಚಿಡ್ ಇಂಟರ್ ನ್ಯಾಷನಲ್ ಸ್ಕೂಲ್ ವಿರುದ್ಧ ಆರೋಪ ಕೇಳಿಬಂದಿದೆ.
ಮಕ್ಕಳು ಫೀಸ್ ಕಟ್ಟಿಲ್ಲ ಅಂದ್ರೆ ಡಾರ್ಕ್ ರೂಮ್‌ನಲ್ಲಿ ಕೂಡಿ ಹಾಕ್ತಾರೆ. ಬಹುತೇಕ ಮಕ್ಕಳನ್ನ ಲೈಬ್ರರಿಯಲ್ಲಿ ಕೂಡ ಕೂಡಿ ಹಾಕುತ್ತಾರೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಆರೋಪಿಸಿದ್ದಾರೆ. ಶಾಲೆಯ ಈ ಕ್ರಮ ದಿಂದಾಗಿ ಮಕ್ಕಳ ಬೌದ್ಧಿಕ ಮಾನಸಿಕ ಸ್ಥಿತಿ ಹದಗೆಟ್ಟಿದೆ. ಈ ಬಗ್ಗೆ ಮಕ್ಕಳು ಪೋಷಕರ ಗಮನಕ್ಕೆ ತಂದ್ರೆ ಹೆಚ್ಚಿನ ಟಾರ್ಚರ್ ಕೊಡ್ತಾರಂತೆ. ಶಾಲೆಯ ನಡವಳಿಕೆ ಖಂಡನೀಯ. ಹೀಗಾಗಿ ಶಾಲೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಪೋಷಕರಿಂದ ಒತ್ತಾಯ ಕೇಳಿಬಂದಿದೆ.
ಲೈಸೆನ್ಸ್ ನವೀಕರಣದಲ್ಲಿ ಎಲ್ಲೆಡೆ ಸುದ್ದಿಯಾಗಿದ್ದ ಆರ್ಚಿಡ್ ಶಾಲೆಯ ಮತ್ತೊಂದು ಬ್ರಾಂಚ್ ಆಗಿರುವ ಆರ್ಚಿಡ್ ದಿ ಇಂಟರ್ ನ್ಯಾಷನಲ್ ಶಾಲೆ ವಿರುದ್ಧ ಇದೀಗ ಇಂತಹ ಗಂಭೀರವಾದ ಆರೋಪ ಕೇಳಿಬಂದಿದೆ. ಕೂಡಲೇ ಶಿಕ್ಷಣ ಇಲಾಖೆ ಈ ಬಗ್ಗೆ ಗಮನ ಹರಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ.