newsics.com
ಕನ್ನಡದ ಬಿಗ್ಬಾಸ್ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಬಿಗ್ಬಾಸ್ ಶುರುವಾಗಿ 70 ದಿನಗಳು ಕಳೆದಿವೆ. ಈ ಮೂಲಕ 11ನೇ ವಾರಕ್ಕೆ ಕಾಲಿಟ್ಟ ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ.
https://www.instagram.com/reel/DDZR4Jrsq9E/?igsh=MWJqaG81bDhlOWpxOA==
ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ದಿನದಿಂದ ಮೋಕ್ಷಿತಾ, ಉಗ್ರಂ ಮಂಜು ಹಾಗೂ ಗೌತಮಿ ಜಾಧವ್ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು. ಇದು ವೀಕ್ಷಕರಿಗೂ ಗೊತ್ತಿರುವ ವಿಚಾರ. ಆದರೆ ಆ ಸ್ನೇಹ ಹೆಚ್ಚು ದಿನ ಉಳಿಯೋಕೆ ಸಾಧ್ಯವಾಗಲಿಲ್ಲ. ಆದರೆ ಟಾಸ್ಕ್ ವಿಚಾರಕ್ಕೆ ಈ ಮೂವರ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು.
ಆದರೆ ಇದೀಗ ಗೌತಮಿ ಮಂಜುಗೆ ಕೈ ಕೊಟ್ಟು ಮೋಕ್ಷಿತಾಗೆ ಹತ್ತಿರವಾಗೋಕೆ ಹೊರಟ್ರಾ ಎಂಬ ಅನುಮಾನ ಮೂಡಿದೆ. ಬಿಗ್ಬಾಸ್ ಕೊಟ್ಟ ಟಾಸ್ಕ್ನಿಂದ ಇಷ್ಟು ದಿನ ದೂರವಾಗಿದ್ದ ಮೋಕ್ಷಿತಾ ಹಾಗೂ ಗೌತಮಿ ಮತ್ತೆ ಜೋಡಿಯಾಗ್ತಾರಾ ಅಂತ ವೀಕ್ಷಕರು ಕೂಡ ಕಾಯುತ್ತಿದ್ದಾರೆ.